ADVERTISEMENT

ಪ್ರಯಾಣಿಕ ವಾಹನ: ಅರ್ಧದಷ್ಟು ಮಾರುಕಟ್ಟೆ ಪಾಲು ಗಳಿಸಲು ಮಾರುತಿ ಯತ್ನ

ಪಿಟಿಐ
Published 28 ಆಗಸ್ಟ್ 2022, 11:11 IST
Last Updated 28 ಆಗಸ್ಟ್ 2022, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ದೇಶಿ ಪ್ರಯಾಣಿಕ ವಾಹನ ವಿಭಾಗದಲ್ಲಿ ಮತ್ತೆ ಶೇಕಡ 50ರಷ್ಟು ಮಾರುಕಟ್ಟೆ ಪಾಲು ಹೊಂದಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುವುದು’ ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌.ಸಿ. ಭಾರ್ಗವ ಹೇಳಿದ್ದಾರೆ.

ಕಂಪನಿಯ ಮಾರುಕಟ್ಟೆ ಪಾಲು 2018-19ನೇ ಹಣಕಾಸು ವರ್ಷದಲ್ಲಿ ಶೇ 51.21ರಷ್ಟು ಇತ್ತು. ಇದು 2021–22ನೇ ಹಣಕಾಸು ವರ್ಷದಲ್ಲಿ ಶೇ 43.38ಕ್ಕೆ ಇಳಿಕೆ ಕಂಡಿದೆ.

ಪ್ರಬಲ ನಾಯಕತ್ವ ಸ್ಥಾನವನ್ನು ಮರಳಿ ಪಡೆದುಕೊಳ್ಳಲು ಕಂಪನಿಯು ನಗರ ಮತ್ತು ಸಣ್ಣ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳ ಅಗತ್ಯಕ್ಕೆ ತಕ್ಕ ಮಾದರಿಗಳನ್ನು ಪೂರೈಸಲು ಯೋಜನೆ ರೂಪಿಸಿದೆ.

ADVERTISEMENT

‘ಮಾರಾಟದ ಗುರಿ ಸಾಧಿಸಲು ಕಂಪನಿಯು ಸ್ಪೋರ್ಟ್ಸ್‌ ಯುಟಿಲಿಟಿ ವಾಹನಗಳನ್ನು (ಎಸ್‌ಯುವಿ) ಅಥವಾ ಇತರೆ ಮಾದರಿಗಳನ್ನು ಬಿಡುಗಡೆ ಮಾಡಲಿದೆ’ ಎಂದು ಅವರು ತಿಳಿಸಿದ್ದಾರೆ. 2018–19ರಲ್ಲಿ ದೇಶದಲ್ಲಿ 33.77 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು. ಇದು 2021–22ರಲ್ಲಿ 30.69 ಲಕ್ಷಕ್ಕೆ ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.