
ಚೆನ್ನೈ: ವಧು–ವರ ಆಯ್ಕೆಯ ಆನ್‌ಲೈನ್ ತಾಣವಾಗಿರುವ ‘ಮ್ಯಾಟ್ರಿಮೋನಿಡಾಟ್‌ಕಾಂ’ನಲ್ಲಿ ನಕಲಿ ಖಾತೆದಾರರ ಹಾವಳಿ ಹೆಚ್ಚಿದೆ. ಇದರಿಂದ ನೈಜ ಚಂದಾದಾರರು ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕದಂತೆ ತಡೆಯಲು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾಟ್ರಿಮೋನಿ ಕಂಪನಿ ತಿಳಿಸಿದೆ.
ಹಣ ಪಾವತಿಸುವಂತೆ ಬೇಡಿಕೆ, ಉತ್ಪನ್ನವು ಕೈಗೆ ಸಿಕ್ಕಿದ ನಂತರ ಹಣ ಪಾವತಿಸುವ ಆಯ್ಕೆಯ (ಕ್ಯಾಶ್ ಆನ್ ಡೆಲಿವರಿ) ವಿಧಾನದ ಮೂಲಕ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿವೆ. ಕೆಲವು ನಕಲಿ ಖಾತೆದಾರರು ವಂಚನೆಯಲ್ಲಿ ತೊಡಗಿದ್ದಾರೆ. ಈ ಕೃತ್ಯದ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದು ಕಂಪನಿಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುರುಗವೇಲ್ ಜಾನಕಿರಾಮನ್ ತಿಳಿಸಿದ್ದಾರೆ.
ವಂಚನೆಯ ಜಾಲಕ್ಕೆ ಬೀಳದಂತೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ವಿಡಿಯೊ ಚಿತ್ರೀಕರಿಸಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.