ಬೆಂಗಳೂರು: ವಿಲಾಸಿ ಕಾರ್ ತಯಾರಿಸುವ ದೇಶದ ಅತಿದೊಡ್ಡ ಕಂಪನಿಯಾಗಿರುವ ಮರ್ಸಿಡಿಸ್ ಬೆಂಜ್, 3 ಗಂಟೆಗಳಲ್ಲಿ ಸರ್ವಿಸ್ ಪೂರ್ಣಗೊಳಿಸುವ ವಿಶೇಷ ಸೇವೆಗೆ ಚಾಲನೆ ನೀಡಿದೆ.
ವಾಗ್ದಾನ ನೀಡಿದಂತೆ 3 ಗಂಟೆಗಳಲ್ಲಿ ಸರ್ವಿಸ್ ಪೂರ್ಣಗೊಳ್ಳದಿದ್ದರೆ ಅದಕ್ಕೆ ಸರ್ವಿಸ್ ಶುಲ್ಕ ವಿಧಿಸುವುದಿಲ್ಲ. ಈ ವಿಶೇಷ ಕೊಡುಗೆಯ ‘ಪ್ರೀಮಿಯರ್ ಎಕ್ಸ್ಪ್ರೆಸ್ ಪ್ರೈಮ್’ ಸೇವೆಗೆ ಸೋಮವಾರ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಸದ್ಯದಲ್ಲೇ ಈ ಸೌಲಭ್ಯವನ್ನು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಅಹ್ಮದಾಬಾದ್ನಲ್ಲಿ ಆರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ವಿಲಾಸಿ ಕಾರ್ ವಿಭಾಗದಲ್ಲಿ ದೇಶದಲ್ಲಿ ಈ ಬಗೆಯ ಸರ್ವಿಸ್ ಆರಂಭಿಸಿರುವುದು ಇದೇ ಮೊದಲ ಬಾರಿಗೆಯಾಗಿದೆ. ಈ ವಿಶೇಷ ಸರ್ವಿಸ್ನಲ್ಲಿ ಪ್ರಮುಖ ದುರಸ್ತಿ, ವಾರಂಟಿಗೆ ಸಂಬಂಧಿಸಿದ ದುರಸ್ತಿ ಮತ್ತು ಎಎಂಜಿ ವಾಹನಗಳು ಒಳಗೊಂಡಿರುವುದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.