ADVERTISEMENT

ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಲಿದೆ ಮರ್ಸಿಡೀಸ್ ಬೆಂಜ್

ಪಿಟಿಐ
Published 9 ಮಾರ್ಚ್ 2023, 12:42 IST
Last Updated 9 ಮಾರ್ಚ್ 2023, 12:42 IST
   

ನವದೆಹಲಿ: ಐಷಾರಾಮಿ ಕಾರುಗಳನ್ನು ತಯಾರಿಸುವ ಮರ್ಸಿಡೀಸ್ ಬೆಂಜ್ ಕಂಪನಿಯು ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ತನ್ನ ವಾಹನಗಳ ಬೆಲೆಯನ್ನು ₹ 2 ಲಕ್ಷದಿಂದ ₹ 12 ಲಕ್ಷದವರೆಗೆ ಹೆಚ್ಚಿಸಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕಾರಣದಿಂದಾಗಿ ಈ ಕ್ರಮ ಎಂದು ಕಂಪನಿ ಹೇಳಿದೆ.

ಕಂಪನಿಯು ಮೂರು ತಿಂಗಳ ಅವಧಿಯಲ್ಲಿ ಎರಡನೆಯ ಬಾರಿಗೆ ಬೆಲೆ ಹೆಚ್ಚಿಸುತ್ತಿದೆ. ಯುರೊ ಕರೆನ್ಸಿಯ ಎದುರು ರೂಪಾಯಿ ಮೌಲ್ಯ ಕುಸಿತವಾಗಿರುವುದು ಕೂಡ ಬೆಲೆ ಏರಿಕೆಗೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT