ADVERTISEMENT

ಶಾಖೆಗಳ ಸಂಖ್ಯೆ ಕಡಿತ: ಬಿಒಬಿ ಚಿಂತನೆ

ಪಿಟಿಐ
Published 24 ಮೇ 2019, 18:30 IST
Last Updated 24 ಮೇ 2019, 18:30 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್‌ ಬರೋಡಾ (ಬಿಒಬಿ), ದೇಶದಾದ್ಯಂತ 800 ರಿಂದ 900 ಶಾಖೆಗಳನ್ನು ಸ್ಥಗಿತಗೊಳಿಸುವ ಅಥವಾ ಸ್ಥಳಾಂತರಗೊಳಿಸಲು ಮುಂದಾಗಿದೆ.

ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳ ವಿಲೀನದಿಂದಾಗಿ ಈ ಬ್ಯಾಂಕ್‌ಗಳಿಗೆ ಸೇರಿರುವ ಶಾಖೆಗಳು ‘ಬಿಒಬಿ’ ಹೆಸರಿನಲ್ಲಿ ಅಕ್ಕಪಕ್ಕದಲ್ಲಿ ಅಥವಾ ಹತ್ತಿರದಲ್ಲಿಯೇ ಇರುವುದು ಸಮಂಜಸ ಎನಿಸುವುದಿಲ್ಲ. ಮೂರೂ ಬ್ಯಾಂಕ್‌ಗಳ ಶಾಖೆಗಳು ಒಂದೆಡೆಯೇ ಅಥವಾ ಒಂದೇ ಕಟ್ಟಡದಲ್ಲಿ ಇದ್ದ ನಿದರ್ಶ
ನಗಳೂ ಇವೆ. ಹೀಗಾಗಿ ಈ ಶಾಖೆಗಳನ್ನು ಬೇರೆಡೆ ಸ್ಥಳಾಂತರಿಸುವ ಅಥವಾ ಮುಚ್ಚುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸಮಗ್ರ ಪರಾಮರ್ಶೆ ನಂತರ, 800 ರಿಂದ 900 ಶಾಖೆಗಳನ್ನು ಸ್ಥಳಾಂತರಿಸುವ ಅಗತ್ಯ ಉದ್ಭವಿಸಿದೆ. ಜತೆಗೆ, ಪ್ರಾದೇಶಿಕ ಮತ್ತು ವಲಯವಾರು ಕಚೇರಿಗಳನ್ನೂ ಮುಚ್ಚಬೇಕಾಗಿದೆ ಎಂದು ಬಿಒಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT