ADVERTISEMENT

ಎಂಎಫ್‌ ಸಂಪತ್ತು ಶೇಕಡ 14ರಷ್ಟು ವೃದ್ಧಿ

2022ರ ಜೂನ್‌ ತ್ರೈಮಾಸಿಕ: ಎಎಂಎಫ್‌ಐ ಮಾಹಿತಿ

ಪಿಟಿಐ
Published 6 ಜುಲೈ 2022, 13:42 IST
Last Updated 6 ಜುಲೈ 2022, 13:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶಿ ಮ್ಯೂಚುವಲ್ ಫಂಡ್‌ (ಎಂಎಫ್‌) ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು 2021ರ ಜೂನ್ತ್ರೈಮಾಸಿಕಕ್ಕೆಹೋಲಿಸಿದರೆ2022ರಜೂನ್‌ತ್ರೈಮಾಸಿಕದಲ್ಲಿ ಶೇಕಡ 14ರಷ್ಟು ಬೆಳವಣಿಗೆ ಕಂಡಿದೆ.

ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ₹ 33.2 ಲಕ್ಷ ಕೋಟಿಯಿಂದ ₹ 37.75 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಈಕ್ವಿಟಿ ಯೋಜನೆಗಳಲ್ಲಿ ಬಂಡವಾಳ ಒಳಹರಿವು ಮುಂದುವರಿದಿದೆ. ಇದರಿಂದಾಗಿ ನಿರ್ವಹಣಾ ಸಂಪತ್ತು ಮೌಲ್ಯ ವೃದ್ಧಿಯಾಗಿದೆ ಎಂದು ಅದು ತಿಳಿಸಿದೆ.

ADVERTISEMENT

2022ರ ಮಾರ್ಚ್ ತ್ರೈಮಾಸಿಕದಲ್ಲಿ 43 ಕಂಪನಿಗಳ ಒಟ್ಟಾರೆ ನಿರ್ವಹಣಾ ಸಂಪತ್ತು ಮೌಲ್ಯ ₹ 38.38 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಜೂನ್‌ ತ್ರೈಮಾಸಿಕದಲ್ಲಿ ಸಂಪತ್ತು ಮೌಲ್ಯದಲ್ಲಿ ಇಳಿಕೆ ಆಗಿದೆ.

ಹೂಡಿಕೆದಾರರ ವಿವಿಧ ವರ್ಗಗಳಿಗೆ ಮ್ಯೂಚುವಲ್ ಫಂಡ್‌ಗಳು ಇನ್ನಷ್ಟು ಒಪ್ಪಿತವಾಗಲಿದ್ದು, ಅದು ಉದ್ಯಮವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಎಪ್ಸಿಲನ್‌ ಮನಿ ಕಂಪನಿಯ ಸಹ ಸ್ಥಾಪಕ ಅಭಿಷೇಕ್‌ ದೇವ್‌ ಹೇಳಿದ್ದಾರೆ.

ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಾಗುತ್ತಿರುವುದರ ಜೊತೆಗೆ ಉದ್ಯಮವು ನೀಡುತ್ತಿರುವ ವಿತ್ತೀಯ ಒಳಗೊಳ್ಳುವಿಕೆ ಸೇವೆಗಳಿಂದಾಗಿ ನಿರ್ವಹಣಾ ಸಂಪತ್ತು ವೃದ್ಧಿಯಾಗಿದೆ ಎಂದು ಎನ್‌ಜೆ ಎಎಂಸಿ ನಿರ್ದೇಶಕ ರಾಜೀವ್ ಶಾಸ್ತ್ರಿ ತಿಳಿಸಿದ್ದಾರೆ.

ಪ್ರಮುಖ ಕಂಪನಿಗಳ ನಿರ್ವಹಣಾ ಸಂಪತ್ತು ಮೌಲ್ಯ (ಲಕ್ಷ ಕೋಟಿಗಳಲ್ಲಿ)

ಎಸ್‌ಬಿಐ ಎಂಎಫ್‌;₹ 6.47

ಐಸಿಐಸಿಐ ಪ್ರುಡೆನ್ಶಿಯಲ್‌ ಎಂಎಫ್‌;₹ 4.65

ಎಚ್‌ಡಿಎಫ್‌ಸಿ ಎಂಎಫ್‌;₹ 4.15

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.