ADVERTISEMENT

ಶಿಯೋಮಿ ಸ್ಮಾರ್ಟ್‌ ಸಾಧನ ಬಿಡುಗಡೆ

29 ರಿಂದ ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 20:20 IST
Last Updated 17 ಸೆಪ್ಟೆಂಬರ್ 2019, 20:20 IST
ಶಿಯೋಮಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್‌ ಜೈನ್‌, ಉತ್ಪನ್ನಗಳ ಮುಖ್ಯಸ್ಥ ಗಂಗು ರೆಡ್ಡಿ ಮತ್ತು ಉತ್ಪನ್ನ ವ್ಯವಸ್ಥಾಪಕ ಸುದೀಪ್‌ ಸಾಹು ಅವರು ಸ್ಮಾರ್ಟ್‌ ಸಾಧನಗಳನ್ನು ಬಿಡುಗಡೆ ಮಾಡಿದರು
ಶಿಯೋಮಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್‌ ಜೈನ್‌, ಉತ್ಪನ್ನಗಳ ಮುಖ್ಯಸ್ಥ ಗಂಗು ರೆಡ್ಡಿ ಮತ್ತು ಉತ್ಪನ್ನ ವ್ಯವಸ್ಥಾಪಕ ಸುದೀಪ್‌ ಸಾಹು ಅವರು ಸ್ಮಾರ್ಟ್‌ ಸಾಧನಗಳನ್ನು ಬಿಡುಗಡೆ ಮಾಡಿದರು   

ಬೆಂಗಳೂರು: ಶಿಯೋಮಿ ಕಂಪನಿಯು ‘ಸ್ಮಾರ್ಟರ್‌ ಲಿವಿಂಗ್–2020’ ಪರಿಕಲ್ಪನೆಯಡಿಹಲವು ಸ್ಮಾರ್ಟ್‌ ಸಾಧನಗಳನ್ನು ಮಂಗಳವಾರಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಮಿ4ಕೆ’ಸರಣಿಯಲ್ಲಿ 43, 50 ಮತ್ತು 65 ಇಂಚಿನ ಸ್ಮಾರ್ಟ್‌ ಟಿವಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹೊಸ ಟಿವಿಗಳು ಆಂಡ್ರಾಯ್ಡ್‌ 9.0 ಆಧಾರಿತ ಪ್ಯಾಚ್‌ವಾಲ್‌ನಿಂದ ಕಾರ್ಯನಿರ್ವಹಿಸುತ್ತವೆ.ಮಿ ಗ್ರಾಹಕರ ಬೇಡಿಕೆಯನ್ನು ಈ ಟಿವಿಗಳಲ್ಲಿ ಈಡೇರಿಸಲಾಗಿದೆ. ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ ವಿಡಿಯೊ ಕಂಟೆಂಟ್‌ಗಳನ್ನೂ ಆನಂದಿಸಬಹುದು ಎಂದು ಕಂಪನಿ ತಿಳಿಸಿದೆ.

ಮಿ ಸ್ಮಾರ್ಟ್ ವಾಟರ್‌ ಪ್ಯೂರಿಫೈಯರ್‌, ಮಿ ಸ್ಮಾರ್ಟ್‌ ಬ್ಯಾಂಡ್‌ 4 ಹಾಗೂ ಮೋಷನ್‌ ಆ್ಯಕ್ಟಿವೇಟೆಡ್‌ ನೈಟ್‌ ಲೈಟ್‌ 2 ಸಹ ಬಿಡುಗಡೆ ಮಾಡಲಾಗಿದೆ.

ADVERTISEMENT

ಟಿವಿ ಮತ್ತು ವಾಟರ್‌ ಪ್ಯೂರಿಫೈಯರ್‌ 29ರಿಂದ ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯವಾಗಲಿವೆ. ಸ್ಮಾರ್ಟ್‌ ಬ್ಯಾಂಡ್‌ ಖರೀದಿ 19ರಿಂದ ಆನ್‌ಲೈನ್‌ನಲ್ಲಿ ಆರಂಭವಾಗಲಿದೆ.

‘ಶಿಯೋಮಿ, ಸ್ಮಾರ್ಟ್‌ಫೋನ್‌ ಕಂಪನಿಯಾಗಿ ಮಾತ್ರವೇ ಉಳಿದಿಲ್ಲ. ನಿತ್ಯ ಜೀವನದ ಅಗತ್ಯಕ್ಕೆ ಬೇಕಾದಂತಹ ಸ್ಮಾರ್ಟ್‌ ಸಾಧನಗಳನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ ಟಿವಿ ವಿಭಾಗದಲ್ಲಿ ಶಿಯೋಮಿ ಬ್ರ್ಯಾಂಡ್‌ ಮೊದಲ ಸ್ಥಾನ ಪಡೆದುಕೊಂಡಿದೆ.5 ವರ್ಷದಲ್ಲಿ 10 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಮನು ಕುಮಾರ್‌ ಜೈನ್‌ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.