ADVERTISEMENT

ಮೈಕ್ರೊಸಾಫ್ಟ್‌ ನಿರ್ದೇಶಕ ಮಂಡಳಿ ತೊರೆದ ಬಿಲ್‌ ಗೇಟ್ಸ್‌

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 19:52 IST
Last Updated 15 ಮಾರ್ಚ್ 2020, 19:52 IST
ಬಿಲ್ ಗೇಟ್ಸ್
ಬಿಲ್ ಗೇಟ್ಸ್   

ಸ್ಯಾನ್‌ಫ್ರಾನ್ಸಿಸ್ಕೊ:ಮೈಕ್ರೊಸಾಫ್ಟ್‌ನ ಸಹ ಸ್ಥಾಪಕ ಬಿಲ್‌ ಗೇಟ್ಸ್‌ ಅವರು ದಾನ ಧರ್ಮ ಕಾರ್ಯಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕಂಪನಿಯ ನಿರ್ದೇಶಕ ಮಂಡಳಿಯಿಂದ ಹೊರನಡೆದಿದ್ದಾರೆ.

64 ವರ್ಷದ ಅವರು ದಶಕದ ಹಿಂದೆಯೇ ಕಂಪನಿಯ ದೈನಂದಿನ ಕೆಲಸಗಳಿಂದ ದೂರ ಉಳಿದು, ತಮ್ಮ ಪತ್ನಿ ಜತೆ ಸ್ಥಾಪಿಸಿರುವ ಮಿಲಿಂದಾ ಫೌಂಡೇಷನ್‌ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡಿದ್ದರು.

‘ಅವರೊಂದಿಗೆ ಕೆಲಸ ಮಾಡಲು ಅವಕಾಶ ದೊರೆತದ್ದು ನನ್ನ ಪುಣ್ಯವೇ ಸರಿ. ಅವರಿಂದ ಬಹಳಷ್ಟನ್ನು ಕಲಿತಿದ್ದೇನೆ’ ಎಂದು ಸಿಇಒ ಸತ್ಯ ನಾದೆಲ್ಲಾ ಅವರು ತಿಳಿಸಿದ್ದಾರೆ.

ADVERTISEMENT

ಚೀನಾದಾಚೆಗೆ ಆ್ಯಪಲ್‌ ಮಳಿಗೆ ಬಂದ್

ಆ್ಯಪಲ್‌ ಕಂಪನಿಯು ಚೀನಾದಾಚೆಗೆ ಇರುವ ತನ್ನೆಲ್ಲಾ ಆ್ಯಪಲ್‌ ಸ್ಟೋರ್‌ಗಳನ್ನು ಇದೇ 27ರವರೆಗೆ ಮುಚ್ಚುವುದಾಗಿ ತಿಳಿಸಿದೆ. ಕೊರೊನಾ ವೈರಸ್‌ ಹರಡುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಇಒ ಟಿಮ್‌ ಕುಕ್‌ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.