ADVERTISEMENT

ಎ.ಐ. ಆಧಾರಿತ ಬಿಂಗ್‌ ಸಾರ್ವಜನಿಕರಿಗೆ ಮುಕ್ತಗೊಳಿಸಿದ ಮೈಕ್ರೋಸಾಫ್ಟ್‌

ರಾಯಿಟರ್ಸ್
Published 4 ಮೇ 2023, 16:00 IST
Last Updated 4 ಮೇ 2023, 16:00 IST
ಮೈಕ್ರೋಸಾಫ್ಟ್‌
ಮೈಕ್ರೋಸಾಫ್ಟ್‌   

ಬೆಂಗಳೂರು: ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಬಿಂಗ್‌ ಸರ್ಚ್‌ ಎಂಜಿನ್‌ ಅನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.

ಪಠ್ಯದ ಮೂಲಕ ಮಾತ್ರ ನಡೆಸುವ ಶೋಧ ಮತ್ತು ಚಾಟ್‌ಗೆ ಬದಲಾಗಿ ಇಮೇಜ್‌ ಮತ್ತು ವಿಡಿಯೊ ಮೂಲಕವೂ ಹುಡುಕಾಟ ನಡೆಸುವಂತೆ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಕಂಪನಿಯು ಗುರುವಾರ ಹೇಳಿದೆ.

ಬಿಂಗ್‌ ಚಾಟ್‌ನ ವೈಶಿಷ್ಟ್ಯಗಳನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲಾಗುತ್ತಿದೆ. ಹಿಂದಿನ ಚಾಟ್‌ಗೆ ಮರಳಲು ಮತ್ತು ಚಾಟ್‌ ಹಿಸ್ಟರಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.