ADVERTISEMENT

ಕ್ಯಾಸಿನೊ, ಕುದುರೆ ರೇಸ್ ತೆರಿಗೆ ಹೆಚ್ಚಳ ಸಾಧ್ಯತೆ

ಪಿಟಿಐ
Published 2 ಮೇ 2022, 16:22 IST
Last Updated 2 ಮೇ 2022, 16:22 IST

ನವದೆಹಲಿ: ಕ್ಯಾಸಿನೊ, ಕುದುರೆ ರೇಸ್ ಮತ್ತು ಆನ್‌ಲೈನ್‌ ಗೇಮಿಂಗ್ ಸೇವೆಗಳಿಗೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ಅಡಿಯಲ್ಲಿ ಶೇಕಡ 28ರಷ್ಟು ತೆರಿಗೆ ವಿಧಿಸಬೇಕು ಎಂಬ ವಿಚಾರವಾಗಿ ರಾಜ್ಯಗಳ ಹಣಕಾಸು ಸಚಿವರ ಸಮಿತಿಯು ಸಹಮತ ಹೊಂದಿದೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ.

ಈ ಸೇವೆಗಳ ಮೌಲ್ಯ ಅಂದಾಜಿಸುವುದು ಹೇಗೆ ಎಂಬುದನ್ನು ಸಮಿತಿಯು ತೀರ್ಮಾನಿಸಬೇಕಿದೆ. ಕ್ಯಾಸಿನೊ, ಕುದುರೆ ರೇಸ್ ಮತ್ತು ಆನ್‌ಲೈನ್‌ ಗೇಮಿಂಗ್ ಸೇವೆಗಳಿಗೆ ಈಗ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ.‌

ಕ್ಯಾಸಿನೊ, ಗೇಮಿಂಗ್ ಪೋರ್ಟಲ್‌ಗಳು ಮತ್ತು ಕುದುರೆ ರೇಸ್‌ನ ಮೌಲ್ಯ ನಿಗದಿಯನ್ನು ಇನ್ನಷ್ಟು ಸಮರ್ಪಕವಾಗಿ ಮಾಡಲು ಕೇಂದ್ರ ಸರ್ಕಾರವು ಕಳೆದ ವರ್ಷದ ಮೇ ತಿಂಗಳಿನಲ್ಲಿ ಸಚಿವರ ಸಮಿತಿಯನ್ನು ರಚಿಸಿತ್ತು.

ADVERTISEMENT

ಮೇಘಾಲಯ ಹಣಕಾಸು ಸಚಿವ ಕಾನ್‌ರಾಡ್‌ ಸಂಗ್ಮಾ ನೇತೃತ್ವದಲ್ಲಿ ಸಮಿತಿಯ ಸಭೆಯು ಸೋಮವಾರ ನಡೆಯಿತು. ಸಚಿವರ ಸಮಿತಿಯ ವರದಿಯನ್ನು ಜಿಎಸ್‌ಟಿ ಮಂಡಳಿಯು ಮುಂದಿನ ಬಾರಿ ಸಭೆ ಸೇರಿದಾಗಿ ಪರಿಶೀಲನೆಗೆ ಎತ್ತಿಕೊಳ್ಳಲಿದೆ. ಜಿಎಸ್‌ಟಿ ಮಂಡಳಿ ಸಭೆಯು ಇದೇ ತಿಂಗಳಿನಲ್ಲಿ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.