ADVERTISEMENT

ಎಂ–ಕ್ಯಾಪ್‌ ₹355 ಲಕ್ಷ ಕೋಟಿಯಷ್ಟು ಏರಿಕೆ

ಪಿಟಿಐ
Published 14 ಡಿಸೆಂಬರ್ 2023, 16:34 IST
Last Updated 14 ಡಿಸೆಂಬರ್ 2023, 16:34 IST
   

ನವದೆಹಲಿ: ಮುಂಬೈ ಷೇರು ಸೂಚ್ಯಂಕದಲ್ಲಿನ (ಬಿಎಸ್‌ಇ) ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳವು (ಎಂ–ಕ್ಯಾಪ್‌) ಗುರುವಾರ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹3.55 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ.

ಸೆನ್ಸೆಕ್ಸ್ ಸೂಚ್ಯಂಕ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದರಿಂದ ಹೂಡಿಕೆದಾರರು ₹3.83 ಲಕ್ಷ ಕೋಟಿಯಷ್ಟು ಗಳಿಕೆ ಕಂಡಿದ್ದಾರೆ.

ಅಮೆರಿಕ ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿದರವನ್ನು ಬದಲಾಯಿಸದೆ ಉಳಿಸಿಕೊಂಡ ನಂತರ ಮತ್ತು ಮುಂದಿನ ವರ್ಷ ತಮ್ಮ ಮಾನದಂಡದ ಬಡ್ಡಿದರಕ್ಕೆ ಮೂರು ತ್ರೈಮಾಸಿಕ ಕಡಿತ ಮಾಡುವ ನಿರೀಕ್ಷೆಯಿದೆ ಎಂದು ಸೂಚಿಸಿದೆ. 

ADVERTISEMENT

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್‌ 929 ಅಂಶ ಏರಿಕೆಯಾಗಿ, ಮುಕ್ತಾಯದ ವೇಳೆಗೆ 70,514 ಅಂಶಗಳಿಗೆ ಸ್ಥಿರವಾಯಿತು. ದಿನದ ನಡುವೆ 1,018 ಅಂಶ ಏರಿಕೆಯಾಗಿ 70,602 ಅಂಶಕ್ಕೆ ಮುಟ್ಟಿತ್ತು.

ಬಿಎಸ್‌ಇ ಪಟ್ಟಿ ಮಾಡಿದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು (ಎಂ–ಕ್ಯಾಪ್‌) ದಾಖಲೆಯ ಗರಿಷ್ಠ ₹355 ಲಕ್ಷ ಕೋಟಿಗೆ ತಲುಪಿದೆ. ಹೂಡಿಕೆದಾರರ ಸಂಪತ್ತು ಬುಧವಾರ ₹3.51 ಲಕ್ಷ ಕೋಟಿಯಿಂದ ₹3.83 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಸೆನ್ಸೆಕ್ಸ್ ಸಂಸ್ಥೆಗಳಲ್ಲಿ ಟೆಕ್‌ ಮಹೀಂದ್ರ, ಇನ್ಫೊಸಿಸ್‌, ವಿಪ್ರೊ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಬಜಾಜ್‌ ಫಿನ್‌ಸರ್ವ್‌ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಗಳು ಗಳಿಕೆ ಕಂಡಿವೆ. ಪವರ್‌ ಗ್ರಿಡ್‌, ನೆಸ್ಟ್ಲೆ, ಟೈಟನ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಮಾರುತಿ ಮತ್ತು ಟಾಟಾ ಮೋಟರ್ಸ್‌ ಇಳಿಕೆ ಕಂಡಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ₹4,710 ಕೋಟಿ ಮೌಲ್ಯದ ಈಕ್ವಿಟಿಗಳನ್ನು ಖರೀದಿಸಿದ್ದಾರೆ ಎಂದು ಷೇರುಪೇಟೆ ತಿಳಿಸಿದೆ. ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 1.06 ಮತ್ತು ಸ್ಮಾಲ್‌ಕ್ಯಾಪ್‌ ಶೇ 0.62ರಷ್ಟು ಏರಿಕೆ ಕಂಡಿದೆ.

ಸೂಚ್ಯಂಕಗಳ ಪೈಕಿ ರಿಯಾಲ್ಟಿ ಶೇ 3.80, ಐ.ಟಿ ಶೇ 3.21, ಟೆಕ್‌ ಶೇ 2.72, ಟೆಲಿ ಕಮ್ಯುನಿಕೇಷನ್‌ ಶೇ 2.14, ಫೈನಾನ್ಷಿಯಲ್‌ ಸರ್ವಿಸ್‌ ಶೇ 1.38, ತೈಲ ಮತ್ತು ಅನಿಲ ಶೇ 1.36 ಮತ್ತು ಇಂಧನ ಶೇ 1.28ರಷ್ಟು ಏರಿಕೆ ಕಂಡಿವೆ. ಕನ್ಸೂಮರ್‌ ಡ್ಯುರೇಬಲ್ಸ್‌ ಸೂಚ್ಯಂಕ ಮಾತ್ರ ಇಳಿಕೆ ಕಂಡಿದೆ.

ಯುಎಸ್ ಫೆಡರಲ್ ರಿಸರ್ವ್ ದರಗಳನ್ನು ಬದಲಾಗದೆ ಬಿಡುವ ನಿರ್ಧಾರವು ಭಾರತ ಸೇರಿದಂತೆ ವಿಶ್ವ ಇಕ್ವಿಟಿ ಮಾರುಕಟ್ಟೆಯ ಚಿತ್ತವನ್ನು ಹೆಚ್ಚಿಸಿತು. ಇದು ಸೆನ್ಸೆಕ್ಸ್‌ ದಾಖಲೆ ಬರೆಯುವಂತೆ ಮಾಡಿದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.