ADVERTISEMENT

ಮೊಬಿಕ್ವಿಕ್‌ ವರಮಾನ ಶೇ 80ರಷ್ಟು ಹೆಚ್ಚಳ

ಪಿಟಿಐ
Published 2 ಸೆಪ್ಟೆಂಬರ್ 2022, 19:31 IST
Last Updated 2 ಸೆಪ್ಟೆಂಬರ್ 2022, 19:31 IST
ಡಿಜಿಟಲ್‌ ಹಣಕಾಸು ಸೇವೆಗಳು (ಸಾಂದರ್ಭಿಕ ಚಿತ್ರ)
ಡಿಜಿಟಲ್‌ ಹಣಕಾಸು ಸೇವೆಗಳು (ಸಾಂದರ್ಭಿಕ ಚಿತ್ರ)   

ನವದೆಹಲಿ: ಮೊಬಿಕ್ವಿಕ್‌ ಕಂಪನಿಯ ವರಮಾನವು 2022ರ ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷಲ್ಲಿ ಶೇ 80ರಷ್ಟು ಹೆಚ್ಚಾಗಿದ್ದು ₹ 543 ಕೋಟಿಗೆ ಏರಿಕೆ ಆಗಿದೆ.

2020–21ನೇ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟಾರೆ ವರಮಾನ ₹302 ಕೋಟಿಗೆ ತಲುಪಿತ್ತು.

ಸದ್ಯ, ಪಾವತಿ ಮತ್ತು ಡಿಜಿಟಲ್‌ ಹಣಕಾಸು ಸೇವೆಗಳ ಮೂಲಕ ವರಮಾನ ಗಳಿಸುತ್ತಿರುವುದಾಗಿ ಅದು ತಿಳಿಸಿದೆ.

ADVERTISEMENT

ವಹಿವಾಟು ಸ್ಥಿರತೆ ಹಾದಿಗೆ ಮರಳುತ್ತಿದ್ದು, ಅಲ್ಪಾವಧಿಯ ಹಣಕಾಸಿನ ಗುರಿಗಳನ್ನು ಸಾಧಿಸುವದಲ್ಲದೇ ದೀರ್ಘಾವಧಿಗೆ ಕಂಪನಿಯನ್ನು ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಬ್ಯಾಂಕ್‌ ಆಗಿ ಪರಿವರ್ತಿಸುವ ವಿಶ್ವಾಸವಿದೆ ಎಂದು ಕಂಪನಿಯ ಸಹ ಸ್ಥಾಪಕಿ ಉಪಾಸನಾ ತಕು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಪನಿಯು 2021ರ ಜುಲೈನಲ್ಲಿ ಐಪಿಒಗಾಗಿ ಕರಡು ದಾಖಲೆಪತ್ರಗಳನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿದೆ. ಐಪಿಒ ಮೂಲಕ ₹1,500 ಕೋಟಿ ಬಂಡವಾಳ ಸಂಗ್ರಹಿಸಲು ಉದ್ದೇಶಿಸಿದೆ. ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಲು ಕಂಪನಿಗೆ 2022ರ ನವೆಂಬರ್‌ ವರೆಗೆ ಅವಕಾಶ ಇದೆ.

ಮಾರುಕಟ್ಟೆಯು ಸ್ಥಿರತೆ ಹಾದಿಗೆ ಮರಳಿದ ಬಳಿಕ ಐಪಿಒಗೆ ಬರಲಾಗುವುದು ಎಂದು ಉಪಾಸನಾ ಹೇಳಿದ್ದಾರೆ. 2022ನೇ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟು ಬಳಕೆದಾರರ ಸಂಖ್ಯೆ 12.7 ಕೋಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.