ADVERTISEMENT

ಜಿಡಿಪಿ ಮುನ್ನೋಟ ಕಡಿತಗೊಳಿಸಿದ ಮೂಡೀಸ್‌ ಸರ್ವಿಸ್‌

ಪಿಟಿಐ
Published 14 ನವೆಂಬರ್ 2019, 23:36 IST
Last Updated 14 ನವೆಂಬರ್ 2019, 23:36 IST
ಮೂಡೀಸ್‌
ಮೂಡೀಸ್‌   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 5.6ರಷ್ಟು ಇರಲಿದೆ ಎಂದು ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌ ಅಂದಾಜಿಸಿದೆ.

ವ್ಯಾಪಕವಾಗಿರುವ ಸರಕು ಮತ್ತು ಸೇವೆಗಳ ಬೇಡಿಕೆ ಕುಸಿತಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕೈಗೊಂಡಿದ್ದ ಕ್ರಮಗಳು ಉದ್ದೇಶಿತ ಫಲ ನೀಡಿಲ್ಲ ಎಂಬ ಕಾರಣ ನೀಡಲಾಗಿದೆ.

ಆರ್ಥಿಕ ಪ್ರಗತಿಯಲ್ಲಿನ ಮಂದಗತಿಯು ನಿರೀಕ್ಷೆಗಿಂತ ಹೆಚ್ಚಿನ ಅವಧಿಗೆ ಮುಂದುವರೆಯಲಿದೆ. ಹೀಗಾಗಿ ಸಂಸ್ಥೆಯು ಈ ಹಿಂದೆ ಅಂದಾಜಿಸಿದ್ದ ಶೇ 5.8ರಷ್ಟು ವೃದ್ಧಿ ದರದ ಮುನ್ನೋಟವನ್ನು ಈಗ ಕೆಳಮುಖವಾಗಿ ಪರಿಷ್ಕರಿಸಿದೆ.

ADVERTISEMENT

ಭಾರತದ ಆರ್ಥಿಕತೆಗೆ ಸಂಬಂಧಿಸಿದ ನಮ್ಮ ವೃದ್ಧಿ ದರದ ಮುನ್ನೋಟವನ್ನು ನಾವೀಗ ಪರಿಷ್ಕರಿಸಿದ್ದೇವೆ. 2018ರಲ್ಲಿ ಶೇ 7.4ರಷ್ಟಿದ್ದ ‘ಜಿಡಿಪಿ’ಯು, 2019ರಲ್ಲಿ ಶೇ 5.6ಕ್ಕೆ ಇಳಿಯಲಿದೆ ಎಂದು ಸಂಸ್ಥೆ ತಿಳಿಸಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿಯೂ ಮೂಡೀಸ್‌, ತನ್ನ ಶೇ 6.2ರಷ್ಟು ಜಿಡಿಪಿ ಅಂದಾಜನ್ನು ಶೇ 5.8ಕ್ಕೆ ಇಳಿಸಿತ್ತು.

2020 ಮತ್ತು 2021ರಲ್ಲಿ ಆರ್ಥಿಕ ಚಟುವಟಿಕೆಗಳು ಕ್ರಮವಾಗಿ ಶೇ 6.6 ಮತ್ತು ಶೇ 6.7ರಷ್ಟು ಚೇತರಿಸಿಕೊಳ್ಳಲಿವೆ ಎನ್ನುವುದು ಮೂಡೀಸ್‌ನ ನಿರೀಕ್ಷೆಯಾಗಿದೆ.

ವಿತ್ತೀಯ ಹೊಣೆಗಾರಿಕೆ ನಿಭಾಯಿಸುವ ಭಾರತದ ಸ್ಥಾನಮಾನವು ಮುಂಬರುವ ದಿನಗಳಲ್ಲಿ ಸ್ಥಿರತೆಯಿಂದ ನಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದು ಮೊನ್ನೆಯಷ್ಟೇ ಮೂಡೀಸ್‌ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.