ADVERTISEMENT

ಬ್ರೋಕರೇಜ್ ಮಾತು: ಪಿಎನ್‌ಬಿ ಷೇರು ಮೌಲ್ಯ ₹125ಕ್ಕೆ ಏರಲಿದೆ; ಮೋತಿಲಾಲ್ ಓಸ್ವಾಲ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 21:28 IST
Last Updated 11 ಜೂನ್ 2025, 21:28 IST
   

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ಷೇರು ಮೌಲ್ಯವು ₹125ಕ್ಕೆ ತಲುಪಬಹುದು ಎಂದು ಮೋತಿಲಾಲ್ ಓಸ್ವಾಲ್‌ ಹೇಳಿದೆ. ಪಿಎನ್‌ಬಿಯ ಸಾಲ ನೀಡಿಕೆ ಪ್ರಮಾಣವು ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಶೇಕಡ 15.3ರಷ್ಟು ಏರಿಕೆ ದಾಖಲಿಸಿದೆ.

ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ, ಕೃಷಿ ವಲಯಕ್ಕೆ ನೀಡಿರುವ ಸಾಲವು ಒಟ್ಟು ಸಾಲ ನೀಡಿಕೆ ಹೆಚ್ಚಲು ಕಾರಣ. ಇದೇ ವೇಳೆ ಬ್ಯಾಂಕ್‌ನಲ್ಲಿ ಠೇವಣಿ ಪ್ರಮಾಣವು ಶೇ 14.4ರಷ್ಟು ಹೆಚ್ಚಾಗಿದೆ. ಆರ್‌ಬಿಐ ರೆಪೊ ದರವನ್ನು ಶೇಕಡ 0.50ರಷ್ಟು ತಗ್ಗಿಸಿರುವುದು ಪಿಎನ್‌ಬಿಯಂತಹ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಪ್ರಯೋಜನಕಾರಿ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬ್ಯಾಂಕ್‌ನ ಸಾಲ ನೀಡಿಕೆ ಪ್ರಮಾಣ ಹಾಗೂ ಠೇವಣಿ ಪ್ರಮಾಣವು ತಲಾ ಶೇ 11–12ರಷ್ಟು ಮತ್ತು ಶೇ 10ರಷ್ಟು ಹೆಚ್ಚಳ ಕಾಣುವ ನಿರೀಕ್ಷೆ ಇದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಪಿಎನ್‌ಬಿ ಷೇರು ಬೆಲೆಯು ₹110.29 ಆಗಿತ್ತು.

ADVERTISEMENT

(ಬ್ರೋಕರೇಜ್‌ ಕಂಪನಿಗಳು ನೀಡುವ ಮಾಹಿತಿ, ವಿವರಗಳಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.