ADVERTISEMENT

ಎಂಎಸ್‌ಎಂಇಗೆ ₹ 40 ಸಾವಿರ ಕೋಟಿ ಬಾಕಿ ಪಾವತಿ

ಪಿಟಿಐ
Published 3 ಮೇ 2020, 2:20 IST
Last Updated 3 ಮೇ 2020, 2:20 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್   

ನವದೆಹಲಿ: ‘ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಕೇಂದ್ರೋದ್ಯಮಗಳು ಬಾಕಿ ಉಳಿಸಿಕೊಂಡಿರುವ ₹ 60 ಸಾವಿರ ಕೋಟಿ ಮೊತ್ತದಲ್ಲಿ₹ 40 ಸಾವಿರ ಕೋಟಿ ಪಾವತಿಸಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

‘ಇನ್ನುಳಿದ ₹ 20 ಸಾವಿರ ಕೋಟಿಯನ್ನು ಅಕ್ಟೋಬರ್ ಮೊದಲ ವಾರದಲ್ಲಿ ನೀಡಲಾಗುವುದು‘ ಎಂದು ಹೇಳಿದ್ದಾರೆ.

‘ಆರ್ಥಿಕ ಬೆಳವಣಿಗೆ ಮತ್ತು ಹೂಡಿಕೆ ಉತ್ತೇಜನ ನೀಡುವ ಉದ್ದೇಶದಿಂದ ಮುಂದಿನ ನಾಲ್ಕು ತ್ರೈಮಾಸಿಕಗಳಿಗೆ ಮಾಡಲಿರುವ ಬಂಡವಾಳ ವೆಚ್ಚದ ವಿವರಗಳನ್ನು ನೀಡುವಂತೆ ವಿವಿಧ ಸಚಿವಾಲಯಗಳಿಗೆ ಸೂಚನೆ ನೀಡಲಾಗಿದೆ.ಸರ್ಕಾರದ ಬಂಡವಾಳ ವೆಚ್ಚವು ನಿಯಂತ್ರಣದಲ್ಲಿದ್ದು ಬಜೆಟ್‌ ಅಂದಾಜನ್ನು ತಲುಪಲಾಗುವುದು’ ಎಂದೂ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.