ADVERTISEMENT

ಮುತ್ತೂಟ್ ಫೈನಾನ್ಸ್‌ನಿಂದ ಎಲೆಕ್ಟ್ರಾನಿಕ್ ಗಾಲಿಕುರ್ಚಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 12:51 IST
Last Updated 28 ಜುಲೈ 2021, 12:51 IST

ಬೆಂಗಳೂರು: ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಮುತ್ತೂಟ್ ಫೈನಾನ್ಸ್, ತೀವ್ರ ಬಗೆಯ ಅಂಗವೈಕಲ್ಯ ಹೊಂದಿರುವವರಿಗೆ ಸಂಪೂರ್ಣ ಸ್ವಯಂಚಾಲಿತವಾಗಿರುವ, ಎಲೆಕ್ಟ್ರಾನಿಕ್ ಗಾಲಿಕುರ್ಚಿ ಒದಗಿಸಲು ಮುಂದಾಗಿದೆ.

ಮ್ಯಾನುವಲ್ ಗಾಲಿಕುರ್ಚಿ ಬಳಸಲು ಸಾಧ್ಯವಿಲ್ಲದವರು ಮತ್ತು ಇತರರ ಮೇಲೆ ಸಂಪೂರ್ಣವಾಗಿ ಅವಲಂಬಿತರಾದವರಿಗೆ ಎಲೆಕ್ಟ್ರಾನಿಕ್‌ ಗಾಲಿಕುರ್ಚಿ ವಿತರಿಸಲಾಗುವುದು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. 12 ವರ್ಷದಿಂದ 40 ವರ್ಷದವರೆಗಿನವರು ಇದನ್ನು ಪಡೆಯಬಹುದು.

ಬೆಂಗಳೂರಿನಲ್ಲಿ ವಾಸಿಸುವ ಅಂಗವಿಕಲರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಅಧಿಕೃತ ವೈದ್ಯಕೀಯ ಮಂಡಳಿಯಿಂದ ಶಾಶ್ವತ ಅಂಗವೈಕಲ್ಯ ಪ್ರಮಾಣಪತ್ರ, ಪಂಚಾಯತ್ ಅಧ್ಯಕ್ಷ ಅಥವಾ ನಗರಪಾಲಿಕೆ ಸದಸ್ಯರಿಗಿಂತ ಕೆಳಗಿನ ಸ್ಥಾನ ಹೊಂದಿರದ ಸ್ಥಳೀಯ ಜನಪ್ರತಿನಿಧಿಯ ಶಿಫಾರಸು ಪತ್ರ, ವ್ಯಕ್ತಿಗೆ ಚಿಕಿತ್ಸೆ ನೀಡುವ ವೈದ್ಯರಿಂದ ವೈದ್ಯಕೀಯ ಪ್ರಮಾಣಪತ್ರ.

ADVERTISEMENT

ಅರ್ಜಿಗಳನ್ನು ಆಗಸ್ಟ್ 10ಕ್ಕೂ ಮುನ್ನ ಈ ವಿಳಾಸಕ್ಕೆ ಕಳುಹಿಸಬೇಕು: ಸಿಎಸ್‍ಆರ್ ಮ್ಯಾನೇಜರ್, ನಂ. 90, ಮುತ್ತೂಟ್ ಫೈನಾನ್ಸ್ ಲಿಮಿಟೆಡ್, ಯುಸಿಎಫ್ ಕೇಂದ್ರದ ಎದುರು, ಹೆಣ್ಣೂರು ರಸ್ತೆ, ಥಾಮಸ್ ಟೌನ್ ಅಂಚೆ, ಲಿಂಗರಾಜಪುರ, ಬೆಂಗಳೂರು - 84. ಹೆಚ್ಚಿನ ಮಾಹಿತಿಗೆ 9288003604 ಸಂಖ್ಯೆಯನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.