ADVERTISEMENT

ಸರ್ಕಾರಿ ಸಾಲಪತ್ರಗಳತ್ತ ಹೆಚ್ಚಿದ ಮ್ಯೂಚುವಲ್‌ ಫಂಡ್‌ ಒಲವು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 19:47 IST
Last Updated 12 ನವೆಂಬರ್ 2019, 19:47 IST
   

ಬೆಂಗಳೂರು: ಮ್ಯೂಚುವಲ್‌ ಫಂಡ್‌ (ಎಂಎಫ್‌) ಸಂಸ್ಥೆಗಳು ಕಾರ್ಪೊರೇಟ್‌ ಸಾಲಪತ್ರಗಳಿಗಿಂತಲೂ ಸರ್ಕಾರಿ ಸಾಲ
ಪತ್ರಗಳ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿವೆ.

‘ಯಾವುದೇ ರೀತಿಯ ನಷ್ಟ ಎದುರಿಸಲು ಇಷ್ಟಪಡದೇ ಇರುವುದರಿಂದ ಸಂಸ್ಥೆಗಳು ಈ ನಿರ್ಧಾರ ಕೈಗೊಂಡಿವೆ. ರಿಯಲ್‌ ಎಸ್ಟೇಟ್‌ ವಲಯವು ಮಂದಗತಿ ಬೆಳವಣಿಗೆ ಕಾಣುತ್ತಿದ್ದು, ಬಂಡವಾಳ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ಮ್ಯೂಚುವಲ್‌ ಫಂಡ್‌ನ ನಿಧಿ ನಿರ್ವಾಹಕರು ಸಹ ಇದರತ್ತ ಗಮನ ನೀಡುತ್ತಿಲ್ಲ’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಉಮೇಶ್‌ ಮೆಹ್ತಾ ಹೇಳಿದ್ದಾರೆ.

ಕಾರ್ಪೊರೇಟ್‌ ಸಾಲಪತ್ರಗಳ ಮೇಲಿನ ಹೂಡಿಕೆಯು 2018ರ ಜುಲೈನ ಬಳಿಕ ಶೇ 29.8ರಷ್ಟು ಕಡಿಮೆಯಾಗಿದೆ. ರಿಯಲ್ ಎಸ್ಟೇಟ್‌ ಮತ್ತು ಎನ್‌ಬಿಎಫ್‌ಸಿ ಸಾಲಪತ್ರಗಳ ಮೇಲಿನ ಹೂಡಿಕೆ ಕ್ರಮವಾಗಿ ಶೇ 80.9 ಮತ್ತು ಶೇ 42.7ರಷ್ಟು ಇಳಿಕೆಯಾಗಿದೆ ಎಂದು ಸೆಬಿಯಲ್ಲಿ ಮಾಹಿತಿ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.