ADVERTISEMENT

ಏರ್ ಇಂಡಿಯಾ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ನೇಮಕ

ಪಿಟಿಐ
Published 14 ಮಾರ್ಚ್ 2022, 15:53 IST
Last Updated 14 ಮಾರ್ಚ್ 2022, 15:53 IST
ಎನ್. ಚಂದ್ರಶೇಖರನ್
ಎನ್. ಚಂದ್ರಶೇಖರನ್   

ನವದೆಹಲಿ:ಟಾಟಾ ಸನ್ಸ್‌ನ ಮುಖ್ಯಸ್ಥ ಎನ್. ಚಂದ್ರಶೇಖರನ್ ಅವರನ್ನು ಏರ್ ಇಂಡಿಯಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ವಿಮಾನಯಾನ ಉದ್ಯಮ ಮೂಲಗಳು ಸೋಮವಾರ ತಿಳಿಸಿವೆ.

69 ವರ್ಷಗಳ ಬಳಿಕ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಏರ್ ಇಂಡಿಯಾ ಬಂದು ಸೇರಿದೆ. ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯನ್ನು ₹18,000 ಕೋಟಿ ನೀಡಿ ಟಾಟಾ ಖರೀದಿಸಿತ್ತು.

ಕಳೆದ ವಾರ ಚಂದ್ರಶೇಖರನ್ ಅವರ ನೇಮಕಾತಿಯನ್ನು ವಿಮಾನಯಾನ ಮಂಡಳಿಯು ಅಂತಿಮಗೊಳಿಸಿತ್ತು ಎಂದು ವರದಿಯಾಗಿದೆ.

ADVERTISEMENT

ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು (ಸಿಇಒ ಮತ್ತು ಎಂಡಿ) ಟಾಟಾ ಸನ್ಸ್ ಇನ್ನಷ್ಟೇ ನೇಮಕ ಮಾಡಬೇಕಿದೆ.

ಈ ಮೊದಲು ಏರ್‌ ಇಂಡಿಯಾದ ಸಿಇಒ ಆಗಿ ಅಧಿಕಾರ ವಹಿಸಲು ಟಾಟಾ ಗ್ರೂಪ್ ನೀಡಿದ್ದ ಅವಕಾಶವನ್ನು ಟರ್ಕಿಷ್ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕರ್ ಆಯ್ಚಿ ತಿರಸ್ಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.