ADVERTISEMENT

ಕಿಸಾನ್‌ ಕೇಂದ್ರದಲ್ಲಿ ನ್ಯಾನೊ ಯೂರಿಯಾ ಲಭ್ಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 14:29 IST
Last Updated 7 ಡಿಸೆಂಬರ್ 2024, 14:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್‌ ಸಮೃದ್ಧಿ ಕೇಂದ್ರಗಳಲ್ಲೂ ರೈತರಿಗೆ ದ್ರವರೂಪದ ನ್ಯಾನೊ ಯೂರಿಯಾ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.

ದೇಶದ ಎಲ್ಲಾ ಕೃಷಿ ಹವಾಮಾನ ವಲಯಗಳ ವ್ಯಾಪ್ತಿಯಲ್ಲಿ ದ್ರವರೂಪದ ನ್ಯಾನೊ ಡಿಎಪಿ ಬಳಕೆಗೆ ಸಂಬಂಧಿಸಿದಂತೆ ರಸಗೊಬ್ಬರ ಇಲಾಖೆ ಮತ್ತು ಗೊಬ್ಬರ ತಯಾರಿಸುವ ಕಂಪನಿಗಳಿಂದ ಅಭಿಯಾನ ಆರಂಭಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್‌ ತಿಳಿಸಿದ್ದಾರೆ.

ರಸಗೊಬ್ಬರ ನಿಯಂತ್ರಣ ಆದೇಶ 1985ರ ಅನ್ವಯ ನ್ಯಾನೊ ಡಿಎಪಿ ಬಳಕೆಗೆ ಸರ್ಕಾರ ಅನುಮತಿ ನೀಡಿದೆ. ಕೋರಮಂಡಲ್‌ ಇಂಟರ್‌ನ್ಯಾಷನಲ್‌ ಕಂಪನಿ, ಜುವಾರಿ ಫಾರ್ಮ್ ಹಬ್ ಕಂಪನಿ ಮತ್ತು ಇಫ್ಕೊ ಈ ಗೊಬ್ಬರವನ್ನು ಉತ್ಪಾದಿಸುತ್ತಿವೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.