
ಪ್ರಾತಿನಿಧಿಕ ಪತ್ರ
ಬೆಂಗಳೂರು: ದೇಶದ ಸೌಲಭ್ಯ ವಂಚಿತ ಸಮುದಾಯಗಳ 87 ಸಾವಿರಕ್ಕೂ ಹೆಚ್ಚು ಯುವಕರಿಗೆ ಮಾರುಕಟ್ಟೆ ಸಂಬಂಧಿತ ಡಿಜಿಟಲ್, ಡೊಮೇನ್ ಮತ್ತು ಉದ್ಯೋಗ ಕೌಶಲ ತರಬೇತಿ ನೀಡಲು ನಾಸ್ಕಾಮ್ ಫೌಂಡೇಶನ್ ಮತ್ತು ಐಬಿಎಂ ಪಾಲುದಾರಿಕೆಗೆ ಒಪ್ಪಿವೆ.
ಐಬಿಎಂನ ‘ಸ್ಕಿಲ್ಸ್‌ಬಿಲ್ಡ್’ ಕಾರ್ಯಕ್ರಮದ ಅಡಿಯಲ್ಲಿ ಈ ಪಾಲುದಾರಿಕೆ ಅಂತಿಮಗೊಂಡಿದೆ. ಡಿಜಿಟಲ್
ಜಗತ್ತಿನಲ್ಲಿ ಉದ್ಯೋಗ ಮಾಡಲು ಸಿದ್ಧವಿರುವ ಪ್ರತಿಭಾವಂತರನ್ನು ನಿರ್ಮಾಣ ಮಾಡುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಐಬಿಎಂ ‘ಸ್ಕಿಲ್ಸ್‌ಬಿಲ್ಡ್’ಗೆ ಪ್ರವೇಶ ಪಡೆಯುವವರು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್, ದತ್ತಾಂಶ ವಿಶ್ಲೇಷಣೆಯಂತಹ ಕ್ಷೇತ್ರಗಳಿಗೆ ಸಂಬಂಧಿಸಿದ ಕೋರ್ಸ್‌ಗಳಲ್ಲಿ ಭಾಗಿಯಾಗಬಹುದು.
‘ನಮ್ಮ ಪಾಲುದಾರಿಕೆಯು, ತಂತ್ರಜ್ಞಾನ ಚಾಲಿತ ಕಲಿಕೆಯೊಂದಿಗೆ ಜೀವನೋಪಾಯದ ಅವಕಾಶಗಳನ್ನು
ಕಲ್ಪಿಸುತ್ತದೆ’ ಎಂದು ನಾಸ್ಕಾಮ್ ಫೌಂಡೇಶನ್‌ನ ಸಿಇಒ ಜ್ಯೋತಿ ಶರ್ಮಾ ಹೇಳಿದ್ದಾರೆ. ಈ ಸಹಯೋಗವು 2030ರ ವೇಳೆಗೆ 3 ಕೋಟಿ ಯುವಕರಿಗೆ ಮತ್ತು 2026ರ ಅಂತ್ಯದ ವೇಳೆಗೆ 20 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.