ADVERTISEMENT

ಯುಪಿಐ ವ್ಯವಸ್ಥೆ ಬಳಸಲಿರುವ ನೇಪಾಳ

ಪಿಟಿಐ
Published 17 ಫೆಬ್ರುವರಿ 2022, 15:23 IST
Last Updated 17 ಫೆಬ್ರುವರಿ 2022, 15:23 IST
   

ನವದೆಹಲಿ: ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿದ ಏಕೀಕೃತ ಪಾವತಿ ವ್ಯವಸ್ಥೆಯನ್ನು (ಯುಪಿಐ) ನೇಪಾಳವು ಅಳವಡಿಸಿಕೊಳ್ಳಲಿದೆ. ಭಾರತದ ನಂತರ ಯುಪಿಐ ಅಳವಡಿಕೆ ಮಾಡಿಕೊಳ್ಳಲಿರುವ ಮೊದಲ ದೇಶ ನೇಪಾಳ.

ಈ ವಿಚಾರವಾಗಿ, ಎನ್‌ಪಿಸಿಐನ ಅಂತರರಾಷ್ಟ್ರೀಯ ವಿಭಾಗವಾಗಿರುವ ಎನ್‌ಪಿಸಿಐ ಇಂಟರ್‌ನ್ಯಾಷನಲ್ ಪೇಮೆಂಟ್ಸ್ ಲಿ. (ಎನ್‌ಐಪಿಎಲ್), ಗೇಟ್‌ವೇ ಪೇಮೆಂಟ್ಸ್ ಸರ್ವಿಸ್ (ಜಿಪಿಎಸ್) ಮತ್ತು ಮನಮ್ ಇನ್ಫೊಟೆಕ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಜಿ‍ಪಿಎಸ್ ಕಂಪನಿಯು ನೇಪಾಳದಲ್ಲಿ ಪರವಾನಗಿ ಹೊಂದಿರುವ ಪಾವತಿ ಸೇವಾ ಸಂಸ್ಥೆ. ನೇಪಾಳದ ಜನಸಂಖ್ಯೆ ಸುಮಾರು 3 ಕೋಟಿ. ಅಲ್ಲಿ ಶೇಕಡ 45ರಷ್ಟು ಜನ ಬ್ಯಾಂಕ್ ಖಾತೆ ಹೊಂದಿದ್ದಾರೆ. ಜನಸಂಖ್ಯೆಯಲ್ಲಿ ಶೇ 65ರಷ್ಟು ಮಂದಿ ಸ್ಮಾರ್ಟ್‌ಫೋನ್ ಬಳಸುತ್ತಾರೆ. ಇದು ನೇಪಾಳದಲ್ಲಿ ಕೂಡ ಡಿಜಿಟಲ್ ಕ್ರಾಂತಿಯನ್ನು ಸಾಧ್ಯವಾಗಿಲು ನೆಲೆ ಒದಗಿಸುತ್ತದೆ ಎಂದು ಎನ್‌ಪಿಸಿಐ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.