ADVERTISEMENT

ಜಿಎಸ್‌ಟಿ ಬಡ್ಡಿ: ಸೆ.1ರಿಂದ ಹೊಸ ವ್ಯವಸ್ಥೆ

ಪಿಟಿಐ
Published 26 ಆಗಸ್ಟ್ 2020, 16:09 IST
Last Updated 26 ಆಗಸ್ಟ್ 2020, 16:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯ ಅಡಿ ತೆರಿಗೆ ಪಾವತಿ ಬಾಕಿ ಇದ್ದರೆ, ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸುವ ಪದ್ಧತಿಯು ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಾರ್ಚ್‌ನಲ್ಲಿ ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿಯು, ‘ಬಾಕಿ ಇರಿಸಿಕೊಂಡಿರುವ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸುವ ವ್ಯವಸ್ಥೆಯನ್ನು 2017ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು. ಇದಕ್ಕೆ ಸಂಬಂಧಿಸಿದ ಕಾನೂನಿಗೆ ಪೂರ್ವಾನ್ವಯ ಆಗುವಂತೆ ತಿದ್ದುಪಡಿ ತರಬೇಕು’ ಎಂದು ತೀರ್ಮಾನಿಸಿತ್ತು.

ಆದರೆ, ಮಂಗಳವಾರ ಅಧಿಸೂಚನೆ ಹೊರಡಿಸಿರುವ ಪರೋಕ್ಷ ತೆರಿಗೆಗಳ ಕೇಂದ್ರ ಮಂಡಳಿಯು (ಸಿಬಿಐಸಿ) ಈ ವ್ಯವಸ್ಥೆ ಜಾರಿಗೆ ಬರುವುದು ಸೆಪ್ಟೆಂಬರ್ 1ರಿಂದ ಎಂದು ಹೇಳಿದೆ. ಕೆಲವು ತಾಂತ್ರಿಕ ಮಿತಿಗಳ ಕಾರಣದಿಂದ ಈ ವ್ಯವಸ್ಥೆಯನ್ನು‍ಪೂರ್ವಾನ್ವಯ ಆಗುವಂತೆ ಜಾರಿಗೊಳಿಸಲು ಆಗುತ್ತಿಲ್ಲ ಎಂದು ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.