ADVERTISEMENT

ಕಿರಾಣಿ ವಹಿವಾಟು ಹೆಚ್ಚಳ ನಿರೀಕ್ಷೆ

ಇ–ಕಾಮರ್ಸ್‌ ಹೊಸ ನೀತಿಯ ಪ್ರಭಾವ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 18:06 IST
Last Updated 16 ಜನವರಿ 2019, 18:06 IST
retail store
retail store   

ನವದೆಹಲಿ: ಇ–ಕಾಮರ್ಸ್‌ ಸಂಸ್ಥೆಗಳ ವಹಿವಾಟಿಗೆ ಕಠಿಣ ಸ್ವರೂಪದ ನಿರ್ಬಂಧನೆಗಳನ್ನು ವಿಧಿಸಿರುವುದರಿಂದ ಕಿರಾಣಿ ಅಂಗಡಿಗಳ ವಹಿವಾಟು ಶೇ 1.5 ರಿಂದ ಶೇ 2ರಷ್ಟು ಹೆಚ್ಚಳ ಸಾಧಿಸಲಿದೆ ಎಂದು ಮಾನದಂಡ ನಿಗದಿ ಮಾಡುವ ಸಂಸ್ಥೆ ಕ್ರಿಸಿಲ್‌ ವಿಶ್ಲೇಷಿಸಿದೆ.

ಜನಪ್ರಿಯ ಇ–ಕಾಮರ್ಸ್‌ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ನಿರ್ಬಂಧಿತ ಕ್ರಮಗಳ ಕಾರಣಕ್ಕೆ ತಮ್ಮ ವಹಿವಾಟಿನ ಸ್ವರೂಪವನ್ನು ಬದಲಿಸಬೇಕಾಗಿದೆ. ಇದರಿಂದ 2020ರ ಹಣಕಾಸು ವರ್ಷದಲ್ಲಿ ಸಣ್ಣ – ಪುಟ್ಟ ಕಿರಾಣಿ ಅಂಗಡಿಗಳ ವಹಿವಾಟು ₹ 10 ಸಾವಿರ ಕೋಟಿಗಳಿಂದ ₹ 12 ಸಾವಿರ ಕೋಟಿಗಳವತೆಗೆ ಏರಿಕೆಯಾಗಲಿದೆ ಎಂದು ಕ್ರಿಸಿಲ್‌ ತಿಳಿಸಿದೆ.

ಫ್ಲಿಪ್‌ಕಾರ್ಟ್‌, ಅಮೆಜಾನ್‌ನಂತಹ ಸಂಸ್ಥೆಗಳು ತಾವು ಪಾಲು ಬಂಡವಾಳ ಇಲ್ಲವೆ ಆಡಳಿತಾತ್ಮಕ ನಿಯಂತ್ರಣ ಹೊಂದಿರುವ ಸಂಸ್ಥೆಗಳ ಉತ್ಪನ್ನಗಳನ್ನು ವಿಶೇಷ ಬೆಲೆಗೆ ತಾವೇ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ನಗದು ಮರುಪಾವತಿ, ಬೆಲೆ ಕಡಿತ, ಪ್ರತ್ಯೇಕ ವಿಶೇಷ ಮಾರಾಟ ಮತ್ತಿತರ ಸೌಲಭ್ಯಗಳಿಗೂ ಇನ್ನು ಮುಂದೆ ಕಡಿವಾಣ ಬೀಳಲಿದೆ.

ADVERTISEMENT

‘ನಿರ್ಬಂಧಿತ ಕ್ರಮಗಳ ಫಲವಾಗಿ ಆನ್‌ಲೈನ್‌ ರಿಟೇಲ್‌ ಮಾರುಕಟ್ಟೆಯಲ್ಲಿ ₹ 35 ಸಾವಿರ ಕೋಟಿಗಳಿಂದ ₹ 40 ಸಾವಿರ ಕೋಟಿಗಳ ವಹಿವಾಟಿಗೆ ಧಕ್ಕೆ ಒದಗಲಿದೆ. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ಸ್‌ ಮತ್ತು ಸಿದ್ಧ ಉಡುಪುಗಳ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಕಂಡು ಬರಲಿದೆ. ಇದು ಸಣ್ಣ ವರ್ತಕರಿಗೆ ವರದಾನ ಆಗಿ ಪರಿಣಮಿಸಲಿದೆ’ ಎಂದು ಕ್ರಿಸಿಲ್‌ ರೇಟಿಂಗ್ಸ್‌ನ ಹಿರಿಯ ನಿರ್ದೇಶಕ ಅನುಜ್‌ ಸೇಠಿ ಹೇಳಿದ್ದಾರೆ.

ಗಡುವು ವಿಸ್ತರಣೆ; ಕೇಂದ್ರಕ್ಕೆ ಮನವಿ

ಆನ್‌ಲೈನ್‌ ವಹಿವಾಟಿಗೆ (ಇ–ಕಾಮರ್ಸ್‌) ಸಂಬಂಧಿಸಿದಂತೆ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಹೊಸ ನಿಯಮಗಳ ಪಾಲನೆಯ ಫೆಬ್ರುವರಿ 1ರ ಗಡುವು ವಿಸ್ತರಿಸಲು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ.

‘ಬದಲಾದ ನೀತಿಯ ಬಗ್ಗೆ ಸರ್ಕಾರದಿಂದ ವಿವರಣೆ ಕೇಳಿದ್ದೇವೆ. ನಾಲ್ಕು ತಿಂಗಳವರೆಗೆ ಕಾಲಾವಕಾಶ ನೀಡಬೇಕೆಂದು ಕೇಳಿಕೊಳ್ಳಲಾಗಿದೆ’ ಎಂದು ಅಮೆಜಾನ್‌ ಇಂಡಿಯಾದ ವಕ್ತಾರ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.