ADVERTISEMENT

ನಿಪ್ಪೊ: ಹೊಸ ಲೋಗೊ

​ಪ್ರಜಾವಾಣಿ ವಾರ್ತೆ
Published 12 ಮೇ 2023, 13:12 IST
Last Updated 12 ಮೇ 2023, 13:12 IST
ನಿಪ್ಪೊ ಲೋಗೊ
ನಿಪ್ಪೊ ಲೋಗೊ   

ಬೆಂಗಳೂರು: ನಿಪ್ಪೊ ಹೆಸರಿನ ಬ್ಯಾಟರಿ ಸೆಲ್‌ಗಳನ್ನು ಉತ್ಪಾದಿಸುವ ಇಂಡೊ ನ್ಯಾಷನಲ್ ಲಿಮಿಟೆಡ್‌ ಕಂಪನಿಯು ತನ್ನ ಲೋಗೊ ಬದಲಾಯಿಸಿದೆ. ಹೊಸ ಲೋಗೊ ಕಂಪನಿಯ ಹೊಸ ಅಸ್ಮಿತೆಯನ್ನು ಪ್ರತಿನಿಧಿಸುತ್ತದೆ. ಇದು ಹೆಚ್ಚು ಸಮಕಾಲೀನವಾಗಿದೆ ಎಂದು ಪ್ರಕಟಣೆ ಹೇಳಿದೆ.

‘ಈ ವರ್ಷ ನಾವು ನಿಪ್ಪೊದ ಸ್ವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ. ನಮ್ಮ ಮೂಲ ವಹಿವಾಟಿನ ಜೊತೆಯಲ್ಲೇ, ಹೊಸ ಭಾರತವು ಸೃಷ್ಟಿಸುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳುವುದಕ್ಕೂ ಸಿದ್ಧರಾಗಿದ್ದೇವೆ’ ಎಂದು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ರೆಡ್ಡಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT