ಬೆಂಗಳೂರು: ಹೊಸ ನಿಸಾನ್ ಕಿಕ್ಸ್ ಎಸ್ಯುವಿ ಬುಕಿಂಗ್ಗೆ ನಿಸಾನ್ ಇಂಡಿಯಾ ಚಾಲನೆ ನೀಡಿದೆ.
ದೇಶದಲ್ಲಿನ ಎಲ್ಲಾ ನಿಸಾನ್ ಡೀಲರ್ಶಿಪ್ಗಳಲ್ಲಿ ₹ 25 ಸಾವಿರ ಪಾವತಿಸಿ ಎಸ್ಯುವಿ ಕಾದಿರಿಸಬಹುದು. ಈ ಬಹುನಿರೀಕ್ಷಿತ ಎಸ್ಯುವಿಯನ್ನು ಗ್ರಾಹಕರು ಅಂತರ್ಜಾಲ ತಾಣ www.nissan.inನಲ್ಲಿ ಕೂಡ ಕಾದಿರಿಸಬಹುದು.
‘ಭಾರತದಲ್ಲಿನ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಜಾಗತಿಕ ಉತ್ಪನ್ನ ಮತ್ತು ತಂತ್ರಜ್ಞಾನ ಪರಿಚಯಿಸುವ ನಮ್ಮ ಬದ್ಧತೆಗೆ ಈ ಹೊಸ ನಿಸ್ಸಾನ್ ಕಿಕ್ಸ್ ಸಾಕ್ಷಿಯಾಗಿದೆ. ಭಾರತದ ರಸ್ತೆಗಳಲ್ಲಿ ಹೆಚ್ಚು ಸದೃಢ, ಸುರಕ್ಷತೆ ಮತ್ತು ದೀರ್ಘ ಬಾಳಿಕೆ ಹೊಂದಿದೆ’ ಎಂದು ನಿಸಾನ್ ಮೋಟರ್ ಇಂಡಿಯಾದ ಮಾರಾಟ ನಿರ್ದೇಶಕ ಹರಿದೀಪ್ ಸಿಂಗ್ ಬ್ರಾರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.