ADVERTISEMENT

2050ಕ್ಕೆ ಹಿರಿಯ ನಾಗರಿಕರ ಸಂಖ್ಯೆ ಶೇ 19.5ರಷ್ಟು ಏರಿಕೆ: ನೀತಿ ಆಯೋಗದ ವರದಿ

ಪಿಟಿಐ
Published 19 ಫೆಬ್ರುವರಿ 2024, 20:08 IST
Last Updated 19 ಫೆಬ್ರುವರಿ 2024, 20:08 IST
   

ನವದೆಹಲಿ: ದೇಶದಲ್ಲಿ 2050ರ ವೇಳೆಗೆ ಹಿರಿಯ ನಾಗರಿಕರ ಸಂಖ್ಯೆ ಶೇ 19.5ರಷ್ಟಕ್ಕೆ ತಲುಪಲಿದೆ. ಹಾಗಾಗಿ, ಅವರಿಗೆ ಪ್ರತ್ಯೇಕವಾಗಿ ತೆರಿಗೆ ಸುಧಾರಣೆ, ಉಳಿತಾಯ ಹಾಗೂ ವಸತಿ ಯೋಜನೆ ರೂಪಿಸುವ ಅಗತ್ಯವಿದೆ ಎಂದು ನೀತಿ ಆಯೋಗದ ವರದಿ ಹೇಳಿದೆ.

‘ಭಾರತದಲ್ಲಿ ಹಿರಿಯರ ಆರೈಕೆಯ ಸುಧಾರಣೆಗಳು; ಹಿರಿಯರ ಆರೈಕೆ ಮಾದರಿ ಮರು ರೂಪಿಸುವಿಕೆ’ ಹೆಸರಿನ ಶೀರ್ಷಿಕೆಯ ಈ ವರದಿಯಲ್ಲಿ, ‘ಹಿರಿಯ ನಾಗರಿಕರಿಗೆ ಅಗತ್ಯ ಸೇವೆ ಒದಗಿಸಲು ರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕವಾದ ಪೋರ್ಟಲ್ ರಚಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದೆ.

‘ದೇಶದಲ್ಲಿ ಸಾಮಾಜಿಕ ಭದ್ರತಾ ಚೌಕಟ್ಟು ಸೀಮಿತವಾಗಿದೆ. ಬಹಳಷ್ಟು ಹಿರಿಯ ನಾಗರಿಕರು ಆದಾಯಕ್ಕಾಗಿ ತಮ್ಮ ಉಳಿತಾಯವನ್ನೇ ನಂಬಿಕೊಂಡಿದ್ದಾರೆ. ಆದರೆ, ಬಡ್ಡಿದರದ ಏರಿಳಿತವು ಅವರ ಆದಾಯವನ್ನು ಕಡಿತಗೊಳಿಸುತ್ತಿದೆ. ಕೆಲವೊಮ್ಮೆ ಅವರು ಜೀವನ ನಿರ್ವಹಣೆಗೂ ಸಮಸ್ಯೆಯಾಗುತ್ತಿದೆ. ಹಾಗಾಗಿ, ಹಿರಿಯ ನಾಗರಿಕರ ಬಡ್ಡಿದರದಲ್ಲಿ ನಿರ್ದಿಷ್ಟ ಮಿತಿಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.