ADVERTISEMENT

4 ಕೋಟಿ ಟನ್‌ ಕಬ್ಬಿಣದ ಅದಿರು ಉತ್ಪಾದನೆ: ಎನ್‌ಎಂಡಿಸಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 15:25 IST
Last Updated 19 ಮಾರ್ಚ್ 2022, 15:25 IST
ಸುಮಿತ್‌ ದೇಬ್
ಸುಮಿತ್‌ ದೇಬ್   

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಒಟ್ಟಾರೆ 4 ಕೋಟಿ ಟನ್‌ಗಳಷ್ಟು ದಾಖಲೆ ಪ್ರಮಾಣದ ಅದಿರು ಉತ್ಪಾದನೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರಿ ಸ್ವಾಮ್ಯದ ‌ಎನ್‌ಎಂಡಿಸಿ ಲಿಮಿಟೆಡ್‌ ಶನಿವಾರ ತಿಳಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿ 3.5 ಕೋಟಿ ಟನ್‌ಗಳಷ್ಟು ಉತ್ಪಾದನೆ ಆಗಿತ್ತು.

ಈ ಮೈಲುಗಲ್ಲು ತಲುಪಿದ ದೇಶದ ಮೊದಲ ಕಬ್ಬಿಣದ ಅದಿರು ಕಂಪನಿ ಆಗಿ ಎನ್‌ಎಂಡಿಸಿ ಹೊರಹೊಮ್ಮಿದೆ. ಆತ್ಮನಿರ್ಭರ ಭಾರತ ಯೋಜನೆಯ ಹಾದಿಯಲ್ಲಿ ಇನ್ನೂ ಹಲವು ಮೈಲುಗಲ್ಲುಗಳನ್ನು ದಾಟುವ ವಿಶ್ವಾಸ ಇದೆ. 2030ರ ವೇಳೆಗೆ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು 10 ಕೋಟಿ ಟನ್‌ಗಳಿಗೆ ತಲುಪುವ ಹಾದಿಯಲ್ಲಿ ಸಾಗುತ್ತಿರುವುದನ್ನು ಇದು ತೋರಿಸುತ್ತಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮಿತ್‌ ದೇಬ್‌ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.