ADVERTISEMENT

ದತ್ತಾಂಶ ಸೋರಿಕೆ ಆಗಿಲ್ಲ: ಇನ್ಫೊಸಿಸ್‌, ಕಾಗ್ನಿಜಂಟ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 19:26 IST
Last Updated 20 ಏಪ್ರಿಲ್ 2019, 19:26 IST

ನವದೆಹಲಿ: ‘ದತ್ತಾಂಶ ಸೋರಿಕೆ ಆಗಿರುವುದು ಗಮನಕ್ಕೆ ಬಂದಿಲ್ಲ. ಸೈಬರ್‌ ದಾಳಿಗಳ ಬಗ್ಗೆ ಜಾಗರೂಕರಾಗಿದ್ದೇವೆ’ ಎಂದು ಇನ್ಫೊಸಿಸ್‌ ಮತ್ತು ಕಾಗ್ನಿಜಂಟ್‌ ಕಂಪನಿಗಳು ತಿಳಿಸಿವೆ.

ವಿಪ್ರೊದ ಕಂಪ್ಯೂಟರ್‌ ಸಿಸ್ಟಮ್‌ ಅನ್ನು ಸೈಬರ್‌ ದಾಳಿಕೋರರು ಭೇದಿಸಿದ್ದು, ಅದರ ಕೆಲ ಗ್ರಾಹಕರ ವಿರುದ್ಧ ದಾಳಿ ನಡೆಸಲು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇನ್ಫೊಸಿಸ್, ಕಾಗ್ನಿಜಂಟ್‌ ಕಂಪನಿಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಸೈಬರ್‌ ಸುರಕ್ಷತೆಗೆ ಸಂಬಂಧಿಸಿದ ಬ್ಲಾಗ್‌ ಕ್ರೆಬ್ಸ್‌ಆನ್‌ಸೆಕ್ಯುರಿಟಿ ಹೇಳಿಕೊಂಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇನ್ಫೊಸಿಸ್‌, ಯಾವುದೇ ರೀತಿಯ ಮಾಹಿತಿ ಸೋರಿಕೆ ಆಗಿಲ್ಲ. ಸೈಬರ್‌ ದಾಳಿ ತಡೆಯಲು ಅಗತ್ಯವಾದಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ADVERTISEMENT

ಸುರಕ್ಷತಾ ತಜ್ಞರು ಸೂಕ್ತ ಕ್ರಮ ಕೈಗೊಂಡಿದ್ದು, ನಿರಂತರವಗಿ ಪರಿಶೀಲನೆಯೂ ನಡೆಯುತ್ತಿದೆ ಎಂದು ಕಾಗ್ನಿಜಂಟ್‌ ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.