ADVERTISEMENT

ಇಂದಿನಿಂದ ಹಣಕಾಸು ವರ್ಷ ಶುರು; ತೆರಿಗೆ ಪದ್ಧತಿಯಲ್ಲಿ ಬದಲಾವಣೆಯಿಲ್ಲ– ಸಚಿವಾಲಯ

ಪಿಟಿಐ
Published 1 ಏಪ್ರಿಲ್ 2024, 6:11 IST
Last Updated 1 ಏಪ್ರಿಲ್ 2024, 6:11 IST
   

ನವದೆಹಲಿ: 2024–25 ನೇ ಹೊಸ ಆರ್ಥಿಕ ವರ್ಷ ಇಂದಿನಿಂದ (ಸೋಮವಾರ) ಪ್ರಾರಂಭವಾಗಿದೆ. ವೈಯಕ್ತಿಕ ಆದಾಯ ತೆರಿಗೆಯ ಹೊಸ ಪದ್ಧತಿಯಲ್ಲಿ ಈ ವರ್ಷ ಯಾವುದೆ ಬದಲಾವಣೆ ಇಲ್ಲ. ಐಟಿಆರ್‌ ಪಾವತಿ ವೇಳೆ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹೊಸ ತೆರಿಗೆ ಪದ್ಧತಿ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವ ಹಿನ್ನೆಲೆ ಕಳವಳ ವ್ಯಕ್ತಪಡಿಸಿರುವ ಸಚಿವಾಲಯ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದೆ.

2024 ಏಪ್ರಿಲ್‌1 ರಿಂದ ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ಬಲಾವಣೆಗಳಿಲ್ಲ. ಪರಿಷ್ಕರಿಸಿದ ಹೊಸ ಆದಾಯ ಪದ್ಧತಿಯು ಏ.1 ರಿಂದ ಜಾರಿಗೆ ಬಂದಿದ್ದು, ಇದರಲ್ಲಿ ತೆರಿಗೆ ದರ ಸಾಮಾನ್ಯಕ್ಕಿಂತ ಕಡಿಮೆ ಇದೆ, ಆದರೆ ಕಡಿಮೆ ವಿನಾಯಿತಿಗಳು ಮತ್ತು ಕಡಿತಗಳನ್ನು ಹೊಂದಿದೆ ಎಂದು ತಿಳಿಸಿದೆ.

ADVERTISEMENT

ಹೊಸ ತೆರಿಗೆ ಪದ್ಧತಿಯ ಪ್ರಕಾರ, ₹3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ.

₹5–6 ಲಕ್ಷ ಆದಾಯಕ್ಕೆ ಶೇ 5ರಷ್ಟು ತೆರಿಗೆ

₹6–9 ಲಕ್ಷ ಆದಾಯಕ್ಕೆ  ಶೇ 10ರಷ್ಟು ತೆರಿಗೆ

₹9–12 ಲಕ್ಷ ಆದಾಯಕ್ಕೆ ಶೇ 15ರಷ್ಟು ತೆರಿಗೆ

₹12–15 ಲಕ್ಷ ಆದಾಯ ಹೊಂದಿರುವವರಿಗೆ ಶೇ 15 ರಷ್ಟು ತೆರಿಗೆ

₹15 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಶೇ 30 ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.