ADVERTISEMENT

ಅಕ್ಕಿ ರಫ್ತಿಗೆ ಮಿತಿ ಹೇರುವುದಿಲ್ಲ: ಕೇಂದ್ರ

ಪಿಟಿಐ
Published 31 ಮೇ 2022, 12:30 IST
Last Updated 31 ಮೇ 2022, 12:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಾಸ್ಮತಿ ಅಥವಾ ಇತರ ಯಾವುದೇ ಅಕ್ಕಿಯ ರಫ್ತಿಗೆ ನಿರ್ಬಂಧ ವಿಧಿಸುವ ಚಿಂತನೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದಲ್ಲಿ ಅಕ್ಕಿಯ ಪೂರೈಕೆಯು ಅಗತ್ಯಕ್ಕೆ ಅನುಗುಣವಾಗಿ ಇದೆ, ಅಕ್ಕಿಯ ಬೆಲೆ ಕೂಡ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೇಂದ್ರವು ಗೋಧಿ ರಫ್ತು ನಿಷೇಧಿಸಿ, ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ವಿಧಿಸಿದ ನಂತರದಲ್ಲಿ ಅಕ್ಕಿ ರಫ್ತಿನ ಮೇಲೆಯೂ ಕೆಲವು ಮಿತಿಗಳನ್ನು ಹೇರಬಹುದು ಎಂದು ವರದಿಯಾಗಿತ್ತು.

‘ಅಕ್ಕಿಯ ರಫ್ತು ನಿಯಂತ್ರಿಸುವ ಚಿಂತನೆ ಇಲ್ಲ. ಖಾಸಗಿ ವರ್ತಕರಲ್ಲಿಯೂ ಅಕ್ಕಿ ದಾಸ್ತಾನು ಸಾಕಷ್ಟಿದೆ. ನಮ್ಮ ಉಗ್ರಾಣಗಳಲ್ಲಿ ಕೂಡ ಅಕ್ಕಿಯ ದಾಸ್ತಾನು ಇದೆ’ ಎಂದು ಅಧಿಕಾರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.