ADVERTISEMENT

₹ 1,000ಕ್ಕೆ ಮುಟ್ಟಿದ ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST
   

ಬೆಂಗಳೂರು: 14.2 ಕೆ.ಜಿ ತೂಗುವ ಸಬ್ಸಿಡಿರಹಿತ ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರ್‌ ದರವು ರಾಜ್ಯದ ಅನೇಕ ಕಡೆಗಳಲ್ಲಿ ₹1,000 ಆಸುಪಾಸು ಮುಟ್ಟಿದೆ.

ಬೀದರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹ 1,017 ಇದ್ದರೆ, ಬೆಂಗಳೂರಿನಲ್ಲಿ ₹ 941 ಇದೆ.ಸಿಲಿಂಡರ್‌ ಮೂಲ ದರದ ಜೊತೆ ವಿವಿಧ ತೆರಿಗೆ ಹಾಗೂ ಸುಂಕಗಳನ್ನು ಸೇರಿಸಿ, ಸಿಲಿಂಡರ್‌ ಪೂರೈಸುವ ವಿತರಣಾ ಏಜೆನ್ಸಿಯು ಬಾಟ್ಲಿಂಗ್‌ ಘಟಕದಿಂದ ಇರುವ ದೂರದ ಆಧಾರದ ಮೇಲೆ ದರ ನಿಗದಿ ಮಾಡುತ್ತದೆ.

ಬೀದರ್‌ಗೆ ಬೆಳಗಾವಿ ಬಾಟ್ಲಿಂಗ್‌ ಘಟಕದಿಂದ ಸಿಲಿಂಡರ್‌ ಪೂರೈಕೆ ಮಾಡುತ್ತಿರುವುದರಿಂದ ದರ ದುಬಾರಿಯಾಗಿದೆ.

ADVERTISEMENT

ರಾಜ್ಯದಲ್ಲಿ ಮೂರು ತೈಲ ಕಂಪನಿಗಳಿಗೆ ಸೇರಿದ 11 ಬಾಟ್ಲಿಂಗ್ ಘಟಕಗಳಿವೆ. ಪೆಟ್ರೋಲ್‌ ಹಾಗೂ ಡೀಸೆಲ್‌ ದರ ದಿನನಿತ್ಯದ ಆಧಾರದಲ್ಲಿ ಪರಿಷ್ಕರಣೆ ಆಗುತ್ತಿದೆ. ಅನಿಲ ಸಿಲಿಂಡರ್‌ ದರವನ್ನು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿದೆ.

ಈ ತಿಂಗಳ 5ರಿಂದ ಈಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆ ಆಗಿರುವುದರಿಂದ ಪೆಟೋಲ್‌ ಬೆಲೆ ಲೀಟರ್‌ ₹ 7.50 ಹಾಗೂ ಡೀಸೆಲ್‌ ಲೀಟರ್‌ಗೆ ₹ 4 ಇಳಿಕೆಯಾಗಿದ್ದರೂ, ಅನಿಲ ಸಿಲಿಂಡರ್‌ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.