ADVERTISEMENT

ಎಲ್‌ಪಿಜಿ ದರ ಏರಿಕೆ: ಪ್ರತಿ ಸಿಲಿಂಡರ್‌ಗೆ ₹144.5 ಹೆಚ್ಚಳ

ಪಿಟಿಐ
Published 12 ಫೆಬ್ರುವರಿ 2020, 13:17 IST
Last Updated 12 ಫೆಬ್ರುವರಿ 2020, 13:17 IST
ಎಲ್‌ಪಿಜಿ ಸಿಲಿಂಡರ್‌
ಎಲ್‌ಪಿಜಿ ಸಿಲಿಂಡರ್‌    
""

ನವದೆಹಲಿ:ಅಡುಗೆ ಅನಿಲ ಎಲ್‌ಪಿಜಿ ದರ ಬುಧವಾರ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್‌ ಬೆಲೆ ₹144.5 ಹೆಚ್ಚಳ ಮಾಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಇಂಧನ ದರ ಭಾರೀ ಏರಿಕೆಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರಿಗೆ ಅನುವಾಗುವ ನಿಟ್ಟಿನಲ್ಲಿ ಸರ್ಕಾರ ನೀಡುವ ಸಬ್ಸಿಡಿ ಬಹುತೇಕ ದುಪ್ಪಟ್ಟುಗೊಳಿಸಿದೆ. ಇದರಿಂದಾಗಿ ದರ ಹೆಚ್ಚಳವಾದರೂ ಸಾರ್ವಜನಿಕರಿಗೆ ಹೊರೆಯಾಗುವುದಿಲ್ಲ.

ದರ ಹೆಚ್ಚಳದ ಬಳಿಕಪ್ರತಿ 14.2 ಕೆಜಿಎಲ್‌ಪಿಜಿ ಸಿಲಿಂಡರ್‌ ಬೆಲೆ ₹ 714ರಿಂದ ₹ 858.50 ಆಗಿದೆ. 2014ರ ನಂತರ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಏರಿಕೆ ಮಾಡಲಾಗಿದೆ. ಆಗ ₹220 ಹೆಚ್ಚಳದೊಂದಿಗೆಪ್ರತಿ ಸಿಲಿಂಡರ್‌ ಬೆಲೆ ₹1,241 ತಲುಪಿತ್ತು.

ಸಬ್ಸಿಡಿ ಸಹ ಹೆಚ್ಚಿಸಿರುವುದರಿಂದಸಾರ್ವಜನಿಕರಿಗೆ ಹೊರೆಯಾಗುವುದಿಲ್ಲ.ವರ್ಷಕ್ಕೆ14.2 ಕೆಜಿಯ 12 ಸಿಲಿಂಡರ್‌ ವರೆಗೂಸಬ್ಸಿಡಿ ಅನ್ವಯವಾಗುತ್ತದೆ. ಪ್ರತಿ ಸಿಲಿಂಡರ್‌ಗೆ ಸರ್ಕಾರ ನೀಡುತ್ತಿದ್ದ ₹153.86 ಸಬ್ಸಿಡಿಯನ್ನು ₹291.48ಕ್ಕೆ ಏರಿಕೆ ಮಾಡಲಾಗಿದೆ ಎಂದುಪಿಟಿಐ ವರದಿ ಮಾಡಿದೆ.

ADVERTISEMENT

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಬ್ಸಿಡಿ ₹174.86 ರಿಂದ ₹312.48ಕ್ಕೆ ಹೆಚ್ಚಳ ಮಾಡಲಾಗಿದೆ.

ಎಂದಿನಂತೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಪಡೆಯುವ ಗ್ರಾಹಕರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಜಮೆಯಾಗಲಿದೆ. ಸಬ್ಸಿಡಿ ಅನ್ವಯವಾದ ನಂತರ ಸಾಮಾನ್ಯ ಬಳಕೆದಾರರಿಗೆ ಪ್ರತಿ ಸಿಲಿಂಡರ್‌ಗೆ ₹567.02 ಹಾಗೂಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ₹546.02 ಆಗಲಿದೆ.

ಪರಿಸರ ಸ್ನೇಹಿ ಇಂಧನ ವ್ಯವಸ್ಥೆಯನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಸರ್ಕಾರ,ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 8 ಕೋಟಿ ಬಡ ಮಹಿಳೆಯರ ಮನೆಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಿದೆ.

ಸಾಮಾನ್ಯವಾಗಿ ತಿಂಗಳ ಮೊದಲ ದಿನವೇ ಎಲ್‌ಪಿಜಿ ದರ ಪರಿಷ್ಕರಿಸಲಾಗುತ್ತದೆ. ಆದರೆ, ಇದೇ ಮೊದಲ ಬಾರಿಗೆ ಎರಡು ವಾರಗಳ ಕಾಲಾವಕಾಶ ಪಡೆಯಲಾಗಿದೆ. ಅತಿ ಹೆಚ್ಚು ದರಏರಿಕೆಯ ಕಾರಣದಿಂದಾಗಿ ಅನುಮತಿ ಪಡೆಯಲು ಹೆಚ್ಚುವರಿಸಮಯ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯ ಕಾರಣಗಳಿಂದಾಗಿ ಬೆಲೆ ಏರಿಕೆಯನ್ನು ಮುಂದೂಡಲಾಗಿತ್ತು. ಫೆಬ್ರುವರಿ 8ರಂದು ದೆಹಲಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.