ADVERTISEMENT

ರೂಪಾಯಿ ಮೌಲ್ಯ ಇಳಿಕೆ: ಸರ್ಕಾರಕ್ಕೆ ನಿದ್ದೆಗೆಡುವ ಸ್ಥಿತಿ ಉಂಟಾಗಿಲ್ಲ: ಸಿಇಎ

ಪಿಟಿಐ
Published 3 ಡಿಸೆಂಬರ್ 2025, 14:46 IST
Last Updated 3 ಡಿಸೆಂಬರ್ 2025, 14:46 IST
ರೂಪಾಯಿ
ರೂಪಾಯಿ   

ನವದೆಹಲಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿಯುತ್ತಿರುವುದರಿಂದ ಸರ್ಕಾರವೇನೂ ನಿದ್ದೆಗೆಡುವಂತೆ ಆಗಿಲ್ಲ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್‌ ಹೇಳಿದ್ದಾರೆ.

ಬುಧವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ₹90ಕ್ಕಿಂತ ಕೆಳಕ್ಕೆ ಬಂದಿ ದಾಟಿದೆ. ರೂಪಾಯಿ ಮೌಲ್ಯ ಇಳಿಕೆಯು ಹಣದುಬ್ಬರ ಅಥವಾ ರಫ್ತಿನ ಮೇಲೆ ಪರಿಣಾಮ ಬೀರುತ್ತಿಲ್ಲ ಎಂದು ಹೇಳಿದ್ದಾರೆ.

ರೂಪಾಯಿ ಮೌಲ್ಯ ಇಳಿಕೆಯು ರಫ್ತು ವೆಚ್ಚವನ್ನು ಕಡಿಮೆ ಮಾಡಲಿದ್ದು, ಆಮದು ವೆಚ್ಚವನ್ನು ಹೆಚ್ಚಿಸಲಿದೆ. ತಯಾರಿಕಾ ವೆಚ್ಚದಲ್ಲಿನ ಹೆಚ್ಚಳದಿಂದ ಹರಳು ಮತ್ತು ಆಭರಣಗಳು, ಪೆಟ್ರೋಲಿಯಂ ಮತ್ತು ಎಲೆಕ್ಟ್ರಾನಿಕ್ಸ್‌ ವಲಯಗಳು ಕಡಿಮೆ ಪ್ರಯೋಜನವನ್ನು ಪಡೆಯಲಿದ್ದು, ಹಣದುಬ್ಬರದ ಮೇಲೆ ಒತ್ತಡ ಹೇರುವ ನಿರೀಕ್ಷೆ ಇದೆ. ಆದಾಗ್ಯೂ, ಮುಂದಿನ ವರ್ಷದಲ್ಲಿ ರೂಪಾಯಿ ಮೌಲ್ಯದಲ್ಲಿ ಸುಧಾರಣೆ ಕಾಣುವ ನಿರೀಕ್ಷೆ ಇದೆ ಎಂದಿದ್ದಾರೆ.

ADVERTISEMENT

ಪ್ರಸಕ್ತ ವರ್ಷದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ಶೇ 5ರಷ್ಟು ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.