ನವದೆಹಲಿ: ಲಂಡನ್ ಮೂಲದ ಗ್ರಾಹಕ ತಂತ್ರಜ್ಞಾನ ಕಂಪನಿ ನಥಿಂಗ್, ವರ್ಷ್ಯಾಂತದ ವೇಳೆಗೆ ಭಾರತದಲ್ಲಿ ತನ್ನ ಮೊದಲ ಮಳಿಗೆಯನ್ನು ಆರಂಭಿಸಲಿದೆ.
ನಥಿಂಗ್‌ನ ಸ್ಮಾರ್ಟ್‌ಫೋನ್‌ಗಳನ್ನು (ಫೋನ್ 3) ಭಾರತದಲ್ಲಿ ತಯಾರಿಸಲಾಗುತ್ತಿದೆ. ಈಗ ಇದನ್ನು ರಫ್ತು ಮಾಡಲಾಗುತ್ತಿದೆ ಎಂದು ಕಂಪನಿಯ ಸಹ–ಸಂಸ್ಥಾಪಕ ಅಕಿಸ್ ಇವಾಂಜೆಲಿಡಿಸ್ ಶುಕ್ರವಾರ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಇದು ಕೇವಲ ಮೇಕಿಂಗ್ ಇನ್ ಇಂಡಿಯಾ ಮಾತ್ರವಲ್ಲ, ಭಾರತದಲ್ಲಿ ನಿರ್ಮಿಸಿ ಜಗತ್ತಿಗೆ ಕೊಡುವುದಾಗಿದೆ. ಸಿಎಂಎಫ್ ಜೊತೆಗೂಡಿ ಜಾಗತಿಕ ಪ್ರಧಾನ ಕಚೇರಿಯನ್ನು ಭಾರತದಲ್ಲಿ ಸ್ಥಾಪಿಸಲಾಗುವುದು. ಸ್ಥಳೀಯ ಪ್ರತಿಭೆಗಳ ಜೊತೆಗೂಡಿ ನಮ್ಮ ನಾಯಕತ್ವ ತಂಡವನ್ನು ಬಲಪಡಿಸಿಕೊಳ್ಳಲಾಗುವುದು ಮತ್ತು ಕಂಪನಿಯ ಕಾರ್ಯಾಚರಣೆಗೆ ಇದು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಸಿಎಂಎಫ್ ನಥಿಂಗ್‌ನ ಸಬ್–ಬ್ರ್ಯಾಂಡ್ ಆಗಿದ್ದು, 2023ರಲ್ಲಿ ಸ್ಥಾಪನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.