ADVERTISEMENT

ಭಾರತದಲ್ಲಿ ಹೆಚ್ಚಲಿದೆ ಕುಬೇರರ ಸಂಖ್ಯೆ

ಪಿಟಿಐ
Published 24 ಫೆಬ್ರುವರಿ 2021, 16:56 IST
Last Updated 24 ಫೆಬ್ರುವರಿ 2021, 16:56 IST

ನವದೆಹಲಿ: ಭಾರತದಲ್ಲಿ 30 ಮಿಲಿಯನ್‌ ಡಾಲರ್‌ಗಿಂತ (₹ 217 ಕೋಟಿ) ಹೆಚ್ಚಿನ ಆಸ್ತಿ ಹೊಂದಿರುವ ಕುಬೇರರ ಸಂಖ್ಯೆಯು ಮುಂದಿನ ಐದು ವರ್ಷಗಳಲ್ಲಿ ಶೇಕಡ 63ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾ ವರದಿ ಹೇಳಿದೆ.

ವರದಿಯ ಪ್ರಕಾರ ವಿಶ್ವದಲ್ಲಿ ಇಷ್ಟು ಆಸ್ತಿ ಹೊಂದಿರುವ ವ್ಯಕ್ತಿಗಳ ಸಂಖ್ಯೆ 5.21 ಲಕ್ಷ. ಇಷ್ಟು ಆಸ್ತಿ ಹೊಂದಿರುವ ಭಾರತೀಯರ ಸಂಖ್ಯೆಯು 6,884. ಈ ಸಂಖ್ಯೆಯು ಐದು ವರ್ಷಗಳಲ್ಲಿ 11,198ಕ್ಕೆ ಏರಿಕೆ ಆಗಲಿದೆ ಎಂದು ವರದಿ ಅಂದಾಜಿಸಿದೆ.

ವಿಶ್ವದಲ್ಲಿ ಇಂತಹ ಶ್ರೀಮಂತರ ಪ್ರಮಾಣವು ಐದು ವರ್ಷಗಳಲ್ಲಿ ಶೇ 27ರಷ್ಟು ಹೆಚ್ಚಳ ಆಗಲಿದೆ ಎಂದು ವರದಿ ಹೇಳಿದೆ. ಭಾರತವು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗಲಿದೆ, ಏಷ್ಯನ್‌ ಸೂಪರ್‌ಪವರ್‌ ಎಂಬ ಸ್ಥಾನ ಪಡೆದುಕೊಳ್ಳಲಿದೆ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ಅಧ್ಯಕ್ಷ ಶಿಶಿರ್ ಬೈಜಾಲ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.