ನವದೆಹಲಿ: ಅಂಡಮಾನ್ ದ್ವೀಪದ ಬಳಿ ತೈಲ ನಿಕ್ಷೇಪ ಪತ್ತೆ ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ತಿಳಿಸಿದೆ. ಆದರೆ, ಪತ್ತೆಯಾದ ನಿಕ್ಷೇಪದ ಅಂದಾಜನ್ನು ತಿಳಿಸಿಲ್ಲ.
ಅಂಡಮಾನ್ ಸಮುದ್ರ ಪ್ರದೇಶದ ವಿಜಯಪುರಂ–2ರ ಎರಡನೇ ಬಾವಿಯಲ್ಲಿ ನಿಕ್ಷೇಪ ಪತ್ತೆಯಾಗಿದೆ.
ಆಯಿಲ್ ಇಂಡಿಯಾ ಲಿಮಿಟೆಡ್ ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಅಂಡಮಾನ್ ಸಮುದ್ರದಲ್ಲಿ ಹೈಡ್ರೋಕಾರ್ಬನ್ ನಿಕ್ಷೇಪದ ಪತ್ತೆಗಾಗಿ ಸಂಶೋಧನೆ ನಡೆಸುತ್ತಿವೆ.
ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಒಎನ್‌ಜಿಸಿ ಅಂಡಮಾನ್ ಸಮುದ್ರದಲ್ಲಿ ತೈಲ ನಿಕ್ಷೇಪ ಪತ್ತೆ ಹಚ್ಚಲು ಪ್ರಯತ್ನಿಸಿತ್ತು. ಆದರೆ, ಪ್ರಯತ್ನಕ್ಕೆ ಫಲ ದೊರೆತಿದೆಯೇ ಎಂಬುದು ತಿಳಿದುಬಂದಿಲ್ಲ.
ಅಂಡಮಾನ್ ದ್ವೀಪದ ಪೂರ್ವ ಕರಾವಳಿಯಿಂದ 9.20 ನಾಟಿಕಲ್ ಮೈಲು (17 ಕಿ.ಮೀ) ದೂರದಲ್ಲಿನ ಬಾವಿಯಲ್ಲಿ ತೈಲ ನಿಕ್ಷೇಪ ಪತ್ತೆ ಆಗಿದೆ ಎಂದು ಕೇಂದ್ರ ತೈಲ ಸಚಿವ ಹರದೀಪ್ ಸಿಂಗ್ ಪುರಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.