ADVERTISEMENT

ಆನ್‌ಲೈನ್‌ ನೇಮಕಾತಿ ಶೇ 5ರಷ್ಟು ಕುಸಿತ

ಪಿಟಿಐ
Published 3 ಸೆಪ್ಟೆಂಬರ್ 2019, 8:56 IST
Last Updated 3 ಸೆಪ್ಟೆಂಬರ್ 2019, 8:56 IST
   

ಮುಂಬೈ: ಮಂದಗತಿಯ ಆರ್ಥಿಕತೆಯ ಪರಿಣಾಮವಾಗಿ ಆನ್‌ಲೈನ್‌ನಲ್ಲಿನ ಉದ್ಯೋಗ ನೇಮಕಾತಿಯು ಕುಸಿತ ಕಂಡಿದೆ.

ವಾಹನ ಮತ್ತು ಬಿಡಿಭಾಗ ತಯಾರಿಕೆ ಕ್ಷೇತ್ರದಲ್ಲಿ ಜನವರಿಯಿಂದ ಜೂನ್‌ ಅವಧಿಯಲ್ಲಿನ ನೇಮಕಾತಿ ಪ್ರಕ್ರಿಯೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 5ರಷ್ಟು ಕಡಿಮೆಯಾಗಿದೆ.

ಟೈರ್‌ ತಯಾರಿಕೆ ವಲಯದಲ್ಲಿ ಇದು ಶೇ 10ರಷ್ಟಿದೆ. ಕೃಷಿ ಆಧಾರಿತ ಕೈಗಾರಿಕೆಗಳಲ್ಲಿನ ಈ ಪ್ರಮಾಣ ಶೇ 51ರಷ್ಟಿದೆ ಎಂದು ಉದ್ಯೋಗ ಮಾರುಕಟ್ಟೆ ವಿಶ್ಲೇಷಿಸುವ ಮಾನ್‌ಸ್ಟರ್‌ ಇಂಡಿಯಾ ಸಂಸ್ಥೆಯ ಎಂಪ್ಲಾಯ್‌ಮೆಂಟ್‌ ಇಂಡೆಕ್ಸ್‌ನ ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.