ADVERTISEMENT

‘ಇಂಧನ ಬಿಕ್ಕಟ್ಟಿಗೆ ಅವಕಾಶ ನೀಡುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 2 ಮೇ 2019, 21:30 IST
Last Updated 2 ಮೇ 2019, 21:30 IST
   

ಟೆಹರಾನ್‌: ‘ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬಿಕ್ಕಟ್ಟು ಎದುರಾಗದೇ ಇರುವಂತೆ ನೋಡಿಕೊಳ್ಳಲಾಗುವುದು’ ಎಂದು ತೈಲೋತ್ಪನ್ನ ರಫ್ತು ದೇಶಗಳ ಸಂಘಟನೆ (ಒಪೆಕ್‌) ಭರವಸೆ ನೀಡಿದೆ.

‘ಒಪೆಕ್‌’ನ ಸದಸ್ಯ ದೇಶಗಳಲ್ಲಿ ಕೆಲವು ಜಾಗತಿಕ ನಿರ್ಬಂಧಕ್ಕೆ ಒಳಗಾಗಿವೆ. ಇನ್ನೂ ಕೆಲವು ದೇಶಗಳಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ‘ಒಪೆಕ್‌’ನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬರ್ಕಿಂದೊ, ‘ತೈಲ ಬಿಕ್ಕಟ್ಟು ಎದುರಾದರೆ ಅದರಿಂದಜಾಗತಿಕ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ ಬಿಕ್ಕಟ್ಟು ತಲೆದೋರದಂತೆ ನೋಡಿಕೊಳ್ಳಲಾಗುವುದು’ ಎಂದಿದ್ದಾರೆ.

ADVERTISEMENT

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತವನ್ನೂ ಒಳಗೊಂಡು 8 ದೇಶಗಳಿಗೆ ಅಮೆರಿಕ ನೀಡಿದ್ದ ವಿನಾಯ್ತಿ ಗುರುವಾರ ಕೊನೆಗೊಂಡಿದೆ. ಇರಾನ್‌ ಮೇಲಿನ ತೈಲ ರಫ್ತು ನಿಷೇಧ ಶುಕ್ರವಾರದಿಂದ ಜಾರಿಗೆ ಬರಲಿದ್ದು, ಈ 8 ದೇಶಗಳು
ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.