ADVERTISEMENT

ಕಚ್ಚಾತೈಲ ಉತ್ಪಾದನೆ ಕಡಿತ ಒಪ್ಪಂದ ಜುಲೈವರೆಗೆ ವಿಸ್ತರಣೆ

ರಾಯಿಟರ್ಸ್
Published 6 ಜೂನ್ 2020, 20:13 IST
Last Updated 6 ಜೂನ್ 2020, 20:13 IST
crude oil
crude oil   

ದುಬೈ/ಲಂಡನ್: ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದಕಚ್ಚಾತೈಲ ಉತ್ಪಾದನೆ ಕಡಿತದ ಅವಧಿಯನ್ನುಜುಲೈ ಅಂತ್ಯದವರೆಗೂ ವಿಸ್ತರಿಸಲುಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ (ಒಪೆಕ್‌) ಮತ್ತು ಇತರ ದೇಶಗಳು ಒಪ್ಪಿಗೆ ಸೂಚಿಸಿವೆ.

ಮೇ 1ರಿಂದ ಜೂನ್‌ ಅಂತ್ಯದವರೆಗೆ 97 ಲಕ್ಷ ಬ್ಯಾರಲ್‌ ಉತ್ಪಾದನೆ ತಗ್ಗಿಸುವ ಕುರಿತುಏಪ್ರಿಲ್‌ನಲ್ಲಿ ಒಪ್ಪಂದಕ್ಕೆ ಬರಲಾಗಿತ್ತು. ಆ ಬಳಿಕ ಜುಲೈ–ಡಿಸೆಂಬರ್‌ ಅವಧಿಗೆ ದಿನದ ಉತ್ಪಾದನೆ ಕಡಿತವನ್ನು 77 ಲಕ್ಷ ಬ್ಯಾರಲ್‌ಗೆ ತಗ್ಗಿಸಲು ನಿರ್ಧರಿಸಲಾಗಿತ್ತು.

ಆದರೆ, ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಬೇಡಿಕೆ ಇಳಿಮುಖವಾಗಿದ್ದು, ದರದಲ್ಲಿಯೂ ಚೇತರಿಕೆ ಕಂಡುಬಂದಿಲ್ಲ. ಹೀಗಾಗಿ ಜೂನ್‌ಗೆ ಅಂತ್ಯವಾಗಬೇಕಿದ್ದ ಒಪ್ಪಂದವನ್ನು ಜುಲೈವರೆಗೂ ವಿಸ್ತರಿಸಲು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ವಿಡಿಯೊ ಕಾನ್ಪರೆನ್ಸ್‌ ಮೂಲಕ ನಡೆದ ಸಭೆಯಲ್ಲಿ ಸೌದಿ ಅರೇಬಿಯಾ ನೇತೃತ್ವದ ಒಪೆಕ್‌ನ ಸದಸ್ಯ ದೇಶಗಳು, ರಷ್ಯಾ ಮತ್ತು ಇತರೆ ದೇಶಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.