
ಪಿಟಿಐ
ಐಪಿಒ
ನವದೆಹಲಿ: ಎಂಟಿಆರ್ ಮತ್ತು ಈಸ್ಟರ್ನ್ ಬ್ರ್ಯಾಂಡ್‌ಗಳ ಮಾಲೀಕತ್ವದ ಓರ್ಕ್ಲಾ ಇಂಡಿಯಾ ಕಂಪನಿಯು, ಸಾರ್ವಜನಿಕರಿಗೆ ಷೇರು ಮಾರಾಟ ಮಾಡುವ (ಐಪಿಒ) ಮೂಲಕ ₹1,667 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.
ಪ್ರತಿ ಷೇರಿನ ಬೆಲೆ ₹695ರಿಂದ ₹730 ಇರಲಿದೆ. ಷೇರುಗಳಿಗೆ ಬಿಡ್ ಸಲ್ಲಿಸಲು ಅಕ್ಟೋಬರ್ 29ರಿಂದ 31ರ ವರೆಗೆ ಅವಕಾಶ ಇರಲಿದೆ. ಆರಂಭಿಕ ಹೂಡಿಕೆದಾರರು (ಆ್ಯಂಕರ್ ಇನ್‌ವೆಸ್ಟರ್ಸ್) ಅಕ್ಟೋಬರ್ 28ರಂದು ಐಪಿಒಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಫರ್ ಫಾರ್ ಸೇಲ್ (ಒಎಫ್‌ಎಸ್) ಮೂಲಕ 2.28 ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದೆ.
ಕಂಪನಿಯು ತನ್ನ ಉತ್ಪನ್ನಗಳನ್ನು ಎಂಟಿಆರ್ ಮತ್ತು ಈಸ್ಟರ್ನ್ ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.