ADVERTISEMENT

ರಿಟೇಲ್ ಸಾಲ ₹162 ಲಕ್ಷ ಕೋಟಿ: ವರದಿ

ಪಿಟಿಐ
Published 24 ಫೆಬ್ರುವರಿ 2026, 15:50 IST
Last Updated 24 ಫೆಬ್ರುವರಿ 2026, 15:50 IST
   

ಮುಂಬೈ: 2025ರ ಡಿಸೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ ಹಣಕಾಸು ಸಂಸ್ಥೆಗಳು ನೀಡಿರುವ ರಿಟೇಲ್ ಸಾಲದ ಮೊತ್ತವು ಶೇ 18.1ರಷ್ಟು ಏರಿಕೆಯಾಗಿ, ₹162 ಲಕ್ಷ ಕೋಟಿಗೆ ತಲುಪಿದೆ ಎಂದು ಸಿಆರ್‌ಐಎಫ್‌ ಹೈ ಮಾರ್ಕ್‌ ವರದಿ ತಿಳಿಸಿದೆ.

ಚಿನ್ನದ ಬೆಲೆಯು ಹೆಚ್ಚಳವಾಗಿದ್ದು, ಚಿನ್ನದ ಅಡಮಾನ ಸಾಲದ ಮೊತ್ತ ಹೆಚ್ಚಳಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಹಬ್ಬದ ಋತು ಮತ್ತು ಜಿಎಸ್‌ಟಿ ದರ ಪರಿಷ್ಕರಣೆಯು ಕೂಡ ಸಾಲ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ತಿಳಿಸಿದೆ.

ರಿಟೇಲ್‌ ಸಾಲಕ್ಕೆ ಹೆಚ್ಚಿನ ಕೊಡುಗೆ ನೀಡುವ ಗೃಹ ಸಾಲ ವಿಭಾಗದಲ್ಲಿ ಸಾಲವು ಶೇ 10.5ರಷ್ಟು ಏರಿಕೆಯಾಗಿದ್ದು, ₹43 ಲಕ್ಷ ಕೋಟಿಯಾಗಿದೆ. ಚಿನ್ನದ ಸಾಲ ವಿಭಾಗದಲ್ಲಿ ₹16.2 ಲಕ್ಷ ಕೋಟಿಯಷ್ಟಾಗಿದ್ದು, ಶೇ 44.1ರಷ್ಟು ಹೆಚ್ಚಳವಾಗಿದೆ. ವೈಯಕ್ತಿಕ ಸಾಲವು ಶೇ 11.6ರಷ್ಟು ಏರಿಕೆಯಾಗಿದ್ದು, ₹15.9 ಲಕ್ಷ ಕೋಟಿಯಾಗಿದೆ.

ADVERTISEMENT

ವಾಹನಗಳ ಸಾಲ ವಿಭಾಗದಲ್ಲಿ ಶೇ 14.6ರಷ್ಟು ಹೆಚ್ಚಳವಾಗಿದೆ. ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಶೇ 12.3ರಷ್ಟು ಮತ್ತು ಗ್ರಾಹಕ ಬಳಕೆಯ ಗೃಹೋಪಯೋಗಿ ಉಪಕರಣಗಳ ವಿಭಾಗದ ಸಾಲವು ಶೇ 14.3ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

30 ದಿನದಿಂದ 180 ದಿನಗಳವರೆಗೆ ಮರುಪಾವತಿ ಆಗದೆ ಬಾಕಿ ಉಳಿದಿರುವ ರಿಟೇಲ್‌ ಸಾಲಗಳು ಡಿಸೆಂಬರ್ ವೇಳೆಗೆ ಶೇ 2.8ಕ್ಕೆ ಇಳಿದಿವೆ. 2024ರ ಇದೇ ಅವಧಿಯಲ್ಲಿ ಇದು ಶೇ 3.2ರಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.