ADVERTISEMENT

3 ಲಕ್ಷ ಎಂಎಸ್‌ಎಂಇ ಸಾಲ ಖಾತೆ ಮರುಹೊಂದಾಣಿಕೆ: ಕೇಂದ್ರ

ಪಿಟಿಐ
Published 22 ಜುಲೈ 2021, 14:26 IST
Last Updated 22 ಜುಲೈ 2021, 14:26 IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಜೂನ್‌ 25ರವರೆಗೆ 13.06 ಲಕ್ಷ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ (ಎಂಎಸ್‌ಎಂಇ) ₹ 55,333 ಕೋಟಿ ಮೊತ್ತದ ಸಾಲವನ್ನು ಮರುಹೊಂದಾಣಿಕೆ ಮಾಡಿವೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ.

ಎಂಎಸ್‌ಎಂಇ ಸಚಿವ ನಾರಾಯಣ್ ರಾಣೆ ಅವರು ಗುರುವಾರ ಈ ಮಾಹಿತಿ ನೀಡಿದ್ದಾರೆ. ತುರ್ತು ಸಾಲ ಖಾತರಿ ಯೋಜನೆಯ ಅಡಿ ಜುಲೈ 2ರವರೆಗೆ ₹ 2.73 ಲಕ್ಷ ಕೋಟಿ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಯೋಜನೆಯ ಅಡಿ, ಕೇಂದ್ರ ಸರ್ಕಾರದ ಶೇ 100ರಷ್ಟು ಖಾತರಿಯೊಂದಿಗೆ ಎಂಎಸ್‌ಎಂಇಗಳನ್ನೂ ಸೇರಿದಂತೆ ಉದ್ದಿಮೆಗಳಿಗೆ ತುರ್ತು ಸಾಲ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT