ADVERTISEMENT

600 ಸಿಬ್ಬಂದಿ ಕಡಿತಕ್ಕೆ ಮುಂದಾದ ಓಯೊ ಕಂಪನಿ

ಪಿಟಿಐ
Published 3 ಡಿಸೆಂಬರ್ 2022, 11:07 IST
Last Updated 3 ಡಿಸೆಂಬರ್ 2022, 11:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಓಯೊ ಕಂಪನಿಯು 600 ಜನರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಇದೇ ವೇಳೆ ನಿರ್ವಹಣಾ ತಂಡಕ್ಕೆ ಹೊಸದಾಗಿ 250 ಜನರನ್ನು ನೇಮಿಸಿಕೊಳ್ಳುವುದಾಗಿಯೂ ತಿಳಿಸಿದೆ.

ಸದ್ಯ ಕಂಪನಿಯಲ್ಲಿ ಒಟ್ಟು 3,700 ಸಿಬ್ಬಂದಿ ಇದ್ದು, ಉದ್ಯೋಗ ಕಡಿತ ಮತ್ತು ಹೊಸ ನೇಮಕಾತಿಯನ್ನೂ ಒಳಗೊಂಡು ಒಟ್ಟಾರೆ ಸಿಬ್ಬಂದಿ ಕಡಿತವು ಶೇ 10ರಷ್ಟು ಆಗಲಿದೆ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು ತನ್ನ ಸಾಂಸ್ಥಿಕ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದ್ದು, ಈ ಉದ್ಯೋಗ ಕಡಿತವು ಅದರ ಒಂದು ಭಾಗವಾಗಿದೆ. ಉತ್ಪನ್ನ ಮತ್ತು ಎಂಜಿನಿಯರಿಂಗ್‌, ಕಾರ್ಪೊರೇಟ್‌ ಕಚೇರಿಗಳು ಮತ್ತು ಓಯೊ ವಕೇಷನ್‌ ಹೋಮ್ಸ್‌ ಟೀಮ್ಸ್‌ನಲ್ಲಿ ಸಿಬ್ಬಂದಿ ಸಂಖ್ಯೆ ತಗ್ಗಿಸಲು ಹಾಗೂ ಪಾಲುದಾರರ ಸಂಬಂಧ ನಿರ್ವಹಣೆ ಮತ್ತು ವಹಿವಾಟು ಅಭಿವೃದ್ಧಿ ತಂಡಗಳಿಗೆ ಹೆಚ್ಚಿನ ಜನರನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ADVERTISEMENT

ಕಾರ್ಯಾಚರಣೆಯನ್ನು ಸುಗಮಗೊಳಿಸಲು ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನು ವಿಲೀನಗೋಳಿಸಲಾಗುವುದು ಎಂದು ಅದು ಹೇಳಿದೆ. ಗ್ರಾಹಕರು ಮತ್ತು ಪಾಲುದಾರರನ್ನು ತೃಪ್ತಿಪಡಿಸಲು ಹಾಗೂ ತನ್ನ ವೇದಿಕೆಯಲ್ಲಿ ಹೋಟೆಲ್‌ ಮತ್ತು ಹೋಮ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುವಂತೆ ವಹಿವಾಟು ಅಭಿವೃದ್ಧಿ ತಂಡವನ್ನು ಬಲಪಡಿಸಲು 250 ಜನರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.