ADVERTISEMENT

ಭಾರತದಿಂದ ಹತ್ತಿ ಆಮದಿಗೆ ಪಾಕ್‌ ಅನುಮತಿ ನೀಡುವ ಸಾಧ್ಯತೆ

ಪಿಟಿಐ
Published 28 ಫೆಬ್ರುವರಿ 2021, 16:34 IST
Last Updated 28 ಫೆಬ್ರುವರಿ 2021, 16:34 IST
ಹತ್ತಿ ಮಾರುಕಟ್ಟೆಯ ದೃಶ್ಯ (ರಾಯಿಟರ್ಸ್‌ ಚಿತ್ರ)
ಹತ್ತಿ ಮಾರುಕಟ್ಟೆಯ ದೃಶ್ಯ (ರಾಯಿಟರ್ಸ್‌ ಚಿತ್ರ)   

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ವ್ಯಾಪಾರವು ಮತ್ತೆ ಆರಂಭವಾಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನವು ಭೂಮಾರ್ಗದ ಮೂಲಕ ಭಾರತದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

ವಾಣಿಜ್ಯ ವಿಷಯದಲ್ಲಿ ಪ್ರಧಾನಿಯ ಸಲಹೆಗಾರ ಸಚಿವ ಅಬ್ದುಲ್‌ ರಜಾಕ್‌ ದಾವೂದ್‌ ಅವರು ಹತ್ತಿ ಮತ್ತು ನೂಲನ್ನುಭಾರತದಿಂದ ಮುಂದಿನ ವಾರದಿಂದ ಆಮದು ಮಾಡಿಕೊಳ್ಳಬೇಕೇ ಬೇಡವೇ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

ದೇಶದಲ್ಲಿ ಹತ್ತಿಯ ಕೊರತೆ ಉಂಟಾಗಿರುವುದನ್ನು ಪ್ರಧಾನಿ ಇಮ್ರಾನ್‌ ಖಾನ್‌ ಅವರ ಗಮನಕ್ಕೆ ಈಗಾಗಲೇ ತರಲಾಗಿದೆ. ಆಮದು ಮಾಡಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಂಡ ಬಳಿಕ ಔಪಚಾರಿಕ ಆದೇಶವನ್ನು ಸಂಸತ್‌ನ ಆರ್ಥಿಕ ಸಮನ್ವಯ ಸಮಿತಿಯ ಮುಂದೆ ಇರಿಸಲಾಗುವುದು ಎಂದು ಮೂಲಗಳು ಹೇಳಿವೆ.

ADVERTISEMENT

ಮೂಲಗಳ ಪ್ರಕಾರ, ಆಮದು ಮಾಡಿಕೊಳ್ಳುವ ಕುರಿತು ಆಂತರಿಕ ಚರ್ಚೆಗಳು ಈಗಾಗಲೇ ಪ್ರಾರಂಭವಾಗಿವೆ. ಆದರೆ ಪ್ರಧಾನಿಯ ಒಪ್ಪಿಗೆ ದೊರೆತ ನಂತರವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಭಾರತದಿಂದ ಆಮದು ತೀರಾ ಅಗ್ಗವಾಗಲಿದ್ದು, ಮೂರರಿಂದ ನಾಲ್ಕು ದಿನಗಳಲ್ಲಿ ಪಾಕಿಸ್ತಾನ ತಲುಪಲಿದೆ.

ಆದರೆ, ಭಾರತದಿಂದ ಆಮದು ಮಾಡಿಕೊಳ್ಳದಂತೆ ಆಲ್‌ ಪಾಕಿಸ್ತಾನ್‌ ಟೆಕ್ಸ್‌ಟೈಲ್ ಮಿಲ್ಸ್‌ ಅಸೋಸಿಯೇಷನ್‌ (ಎಪಿಟಿಎಂಎ) ಅಲ್ಲಿನ ಸರ್ಕಾರಕ್ಕೆ ಒತ್ತಡ ತರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.