ರಾಜ್ಯಸಭೆ ಕಲಾಪ
ನವದೆಹಲಿ: ಹೊಸ ಆದಾಯ ತೆರಿಗೆ ಮಸೂದೆಗೆ ರಾಜ್ಯಸಭೆಯು ಮಂಗಳವಾರ ಅಂಗೀಕಾರ ನೀಡುವುದರೊಂದಿಗೆ ಈ ಮಸೂದೆಗೆ ಸಂಸತ್ತಿನ ಅಂಗೀಕಾರ ದೊರೆತಂತೆ ಆಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಮಸೂದೆ ಮತ್ತು ತೆರಿಗೆ ಕಾನೂನು (ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರು. ಮಸೂದೆಗಳಿಗೆ ರಾಜ್ಯಸಭೆಯ ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು.
1961ರ ಆದಾಯ ತೆರಿಗೆ ಕಾಯ್ದೆಯ ಕೆಲವು ಅಂಶಗಳು ಹಳತಾಗಿದ್ದ ಕಾರಣಕ್ಕೆ ಹೊಸ ಮಸೂದೆಯನ್ನು ಸಿದ್ಧಪಡಿಸಬೇಕಾಯಿತು ಎಂದು ನಿರ್ಮಲಾ ಅವರು ಸದನಕ್ಕೆ ತಿಳಿಸಿದರು.
ಇಂತಹ ಮಹತ್ವದ ಮಸೂದೆಗಳ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳು ಬಯಸುತ್ತಿಲ್ಲ ಎಂದು ನಿರ್ಮಲಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.