ADVERTISEMENT

ಐಟಿ ರಿಟರ್ನ್ಸ್‌ಗೆ ಪಾನ್ ಕಾರ್ಡ್ ಇಲ್ಲದಿದ್ದರೆ ಆಧಾರ್ ಕಾರ್ಡ್ ಸಾಕು

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 12:42 IST
Last Updated 5 ಜುಲೈ 2019, 12:42 IST
   

ನವದೆಹಲಿ: ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆ (ಐಟಿ ರಿಟರ್ನ್ಸ್)ಗಾಗಿ ತೆರಿಗೆದಾರರು ಇನ್ನು ಮುಂದೆ ಪಾನ್ ಕಾರ್ಡ್ ಬದಲು ಆಧಾರ್ ಕಾರ್ಡ್ಬಳಸುವಂತೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

120 ಕೋಟಿಗಿಂತ ಹೆಚ್ಚು ಭಾರತೀಯರು ಆಧಾರ್ ಕಾರ್ಡ್ ಹೊಂದಿದ್ದಾರೆ. ಹೀಗಿರುವಾಗ ತೆರಿಗೆದಾರರಿಗೆ ಲೆಕ್ಕ ಪತ್ರ ಸಲ್ಲಿಕೆ ಸುಲಭವಾಗುವಂತೆ ಮಾಡಲು ಪಾನ್ ಕಾರ್ಡ್ ಬದಲು ಆಧಾರ್ ಕಾರ್ಡ್ ಬಳಸುವಂತೆ ಮಾಡಲು ನಾನು ಶಿಫಾರಸು ಮಾಡಲಿದ್ದೇನೆ. ಸಂಸತ್ತಿನಲ್ಲಿ ಇದಕ್ಕೆ ಹಸಿರು ನಿಶಾನೆ ಸಿಕ್ಕಿದರೆಪಾನ್ ಕಾರ್ಡ್ ಇಲ್ಲದಿರುವವರಿಗೆ ಆಧಾರ್ ಕಾರ್ಡ್ ಬಳಸಿ ಲೆಕ್ಕಪತ್ರ ಸಲ್ಲಿಸಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಐಟಿ ರಿಟರ್ನ್ಸ್ ಸಲ್ಲಿಸಲು ಪಾನ್ ಕಾರ್ಡ್ ಕಡ್ಡಾಯವಾಗಿತ್ತು.ಇದಕ್ಕಾಗಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಕೂಡಾ ಕಡ್ಡಾಯ ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.