ADVERTISEMENT

ಝೊಮ್ಯಾಟೊ ಜತೆಪೇಟಿಎಂ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 18:09 IST
Last Updated 18 ಜನವರಿ 2019, 18:09 IST

ಬೆಂಗಳೂರು: ಗ್ರಾಹಕರು ಆನ್‌ಲೈನ್‌ನಲ್ಲೇ ತಮಗೆ ಬೇಕಾದ ಊಟ-ತಿಂಡಿಗಳನ್ನು ತಮ್ಮ ನೆಚ್ಚಿನ ರೆಸ್ಟೊರೆಂಟ್ಸ್‌ಗಳಿಂದ ತರಿಸಿಕೊಳ್ಳುವ ‘ಆನ್-ಲೈನ್ ಫುಡ್ ಆರ್ಡರ್’ ಸೌಲಭ್ಯಕ್ಕೆ ಮೊಬೈಲ್‌ ವಾಲೆಟ್‌
ಕಂಪನಿ ಪೇಟಿಎಂ ಚಾಲನೆ ನೀಡಿದೆ.

‘ಈ ಉದ್ದೇಶಕ್ಕೆ ಪೇಟಿಎಂ, ಝೊಮ್ಯಾಟೊ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಸದ್ಯಕ್ಕೆ ದೆಹಲಿಯಲ್ಲಿ ಲಭ್ಯ ಇರುವ ಈ ಸೌಲಭ್ಯವು ಶೀಘ್ರದಲ್ಲಿಯೇ ದೇಶದಾದ್ಯಂತ ವಿಸ್ತರಣೆಯಾಗಲಿದೆ’ ಎಂದು ಪೇಟಿಎಂನ ಹಿರಿಯ ಉಪಾಧ್ಯಕ್ಷೆ ರೇಣು ಸತ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT