ADVERTISEMENT

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನಿಂದ ಭೌತಿಕ ಡೆಬಿಟ್ ಕಾರ್ಡ್‌

​ಪ್ರಜಾವಾಣಿ ವಾರ್ತೆ
Published 29 ಮೇ 2021, 17:26 IST
Last Updated 29 ಮೇ 2021, 17:26 IST
ಪೇಟಿಎಂ
ಪೇಟಿಎಂ   

ಬೆಂಗಳೂರು: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ತನ್ನ ಗ್ರಾಹಕರಿಗೆ ಭೌತಿಕ ಸ್ವರೂಪದಲ್ಲಿ ಡೆಬಿಟ್ ಕಾರ್ಡ್‌ ನೀಡುವುದನ್ನು ಆರಂಭಿಸಲಿದೆ. ತನ್ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ವರ್ಚುವಲ್‌ ಡೆಬಿಟ್‌ ಕಾರ್ಡ್‌ಗಳನ್ನು ಅದು ಈಗಾಗಲೇ ನೀಡುತ್ತಿದೆ.

‘ವರ್ಚುವಲ್‌ ಡೆಬಿಟ್‌ ಕಾರ್ಡ್‌ಗಳ ಜನಪ್ರಿಯತೆಯನ್ನು ಗಮನಿಸಿ, ವೀಸಾ ಡೆಬಿಟ್ ಕಾರ್ಡ್‌ ನೀಡಲು ತೀರ್ಮಾನಿಸಲಾಗಿದೆ’ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪ್ರಕಟಣೆ ತಿಳಿಸಿದೆ.

45 ಲಕ್ಷಕ್ಕೂ ಹೆಚ್ಚು ಗ್ರಾಹಕರು ವರ್ಚುವಲ್‌ ಕಾರ್ಡ್‌ಗಳನ್ನು ಈಗಾಗಲೇ ಹೊಂದಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ 10 ಲಕ್ಷಕ್ಕೂ ಹೆಚ್ಚು ಜನರಿಗೆ ಭೌತಿಕ ಕಾರ್ಡ್‌ ವಿತರಿಸುವ ಗುರಿ ಇದೆ ಎಂದು ಅದು ಹೇಳಿದೆ. ಭೌತಿಕ ಸ್ವರೂಪದ ಡೆಬಿಟ್ ಕಾರ್ಡ್‌ ಬಯಸುವ ಗ್ರಾಹಕರು ಪೇಟಿಎಂ ಆ್ಯಪ್‌ ಮೂಲಕವೇ ಅದಕ್ಕೆ ಅರ್ಜಿ ಸಲ್ಲಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.