ನವದೆಹಲಿ: ಪೇಟಿಎಂನ ಮಾತೃಸಂಸ್ಥೆ ಒನ್97 ಕಮ್ಯುನಿಕೇಷನ್ 2024–25ರ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹208 ಕೋಟಿ ನಷ್ಟ ದಾಖಲಿಸಿದೆ.
2023–24ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹221 ಕೋಟಿ ನಷ್ಟ ಕಂಡಿತ್ತು. ವರಮಾನದಲ್ಲಿನ ಇಳಿಕೆಯಿಂದ ನಷ್ಟ ಕಂಡಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
ವರಮಾನದಲ್ಲಿ ಶೇ 35ರಷ್ಟು ಇಳಿಕೆಯಾಗಿದ್ದು, ₹1,827 ಕೋಟಿಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ವರಮಾನ ₹2,850 ಕೋಟಿಯಷ್ಟಿತ್ತು. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಹೊಸ ವಹಿವಾಟಿನಲ್ಲಿ ಶೇ 10ರಷ್ಟು ಏರಿಕೆ ಆಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.