ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿ ಖಾಸಗಿ ಈಕ್ವಿಟಿ ಹೂಡಿಕೆ ಪ್ರಮಾಣ ಶೇ 6ರಷ್ಟು ಏರಿಕೆಯಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ವರದಿ ಸೋಮವಾರ ತಿಳಿಸಿದೆ.
2023–24ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹23,002 ಕೋಟಿ ಹೂಡಿಕೆಯಾಗಿತ್ತು. ಅದು ಈ ಬಾರಿ ₹24,387 ಕೋಟಿ ಹೂಡಿಕೆಯಾಗಿದೆ. ಕೈಗಾರಿಕೆ ಮತ್ತು ಸಾಗಣೆ ವಲಯದಲ್ಲಿ ಬಂಡವಾಳ ಒಳಹರಿವಿನ ಹೆಚ್ಚಳದಿಂದ ಹೂಡಿಕೆ ಪ್ರಮಾಣ ಏರಿಕೆಯಾಗಿದೆ. ಆದರೆ, ಈ ಅವಧಿಯಲ್ಲಿ ಖಾಸಗಿ ಈಕ್ವಿಟಿ ಒಪ್ಪಂದಗಳ ಸಂಖ್ಯೆಯು 30 ರಿಂದ 24ಕ್ಕೆ ಇಳಿದಿದೆ ಎಂದು ತಿಳಿಸಿದೆ.
ವಲಯಕ್ಕೆ ವಿದೇಶಿ ಬಂಡವಾಳದ ಕೊಡುಗೆಯ ಪ್ರಮಾಣ ಶೇ 82ರಷ್ಟಿದ್ದರೆ, ದೇಶೀಯ ಕೊಡುಗೆ ಶೇ 18ರಷ್ಟಿದೆ. ಕೈಗಾರಿಕೆ ಮತ್ತು ಸಾಗಣೆ ವಲಯವು ಒಟ್ಟು ಹೂಡಿಕೆಯ ಪೈಕಿ ಶೇ 62ರಷ್ಟು ಪಾಲನ್ನು ಹೊಂದಿದೆ. ವಸತಿ ಶೇ 15, ಕಚೇರಿ ಶೇ 14 ಮತ್ತು ಇತರೆ ಶೇ 9ರಷ್ಟು ಹೊಂದಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.